ಸುದ್ದಿಗಳು

‘ಮಹಾನಟಿ’ ಬಳಿಕ ಮೊದಲ ತೆಲುಗು ಚಿತ್ರಕ್ಕೆ ಸಹಿ ಹಾಕಿದ ಕೀರ್ತಿ ಸುರೇಶ್

ಹೈದ್ರಾಬಾದ್, ಜ.13: ‘ಮಹಾನಟಿ’ ಚಿತ್ರದಲ್ಲಿನ ಅಭಿನಯದ ಮೂಲಕ ನಟಿ ಕೀರ್ತಿ ಸುರೇಶ್ ಅವರ ಇಮೇಜ್ ಸಂಪೂರ್ಣ ಬದಲಾಯಿತು. ಅದುವರೆಗೂ ಆಕೆ ಹಲವು ಚಿತ್ರಗಳಲ್ಲಿ ನಟಿಸಿದರೂ ಅವರ ಸಿನಿಜೀವನಕ್ಕೆ ಹೊಸ ತಿರುವು ನೀಡಿದ್ದೆ  ಈ ಮಹಾನಟಿ ಚಿತ್ರ. ಚಿತ್ರದಲ್ಲಿನ ಆಕೆಯ ಅಭಿನಯನಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದರು. ಇದಾದ ಬಳಿಕ ಯಾವುದೇ ತೆಲುಗು ಚಿತ್ರಕ್ಕೆ ಸಹಿ ಹಾಕಿರದ ಕೀರ್ತಿ ಸುರೇಶ್ ಉತ್ತಮ ಸ್ಕ್ರೀಪ್ಟ್ ಗಾಗಿ ಕಾಯುತ್ತಿದ್ದರು.

ಇದರ ನಡುವೆ ತಮಿಳಿನ ‘ಸರ್ಕಾರ್’ ಚಿತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದರೂ ಚಿತ್ರದಲ್ಲಿ ಕೀರ್ತಿಗೆ ಹೇಳಿಕೊಳ್ಳುವ ಪಾತ್ರವಿರಲಿಲ್ಲ. ನಟ ವಿಜಯ್ ಪಾತ್ರಕ್ಕಷ್ಟೇ ಇಲ್ಲಿ ಮಹತ್ವವಿತ್ತು. ಹೀಗಾಗಿ ಕೀರ್ತಿ ಅಭಿಮಾನಿಗಳು ಬೇಸರಕೊಂಡಿದ್ದು ಇದೆ. ಮಹಾನಟಿಯಂತಹ ಚಿತ್ರ ಮಾಡಿದ ಬಳಿಕ ಕೀರ್ತಿ ಯಾಕಪ್ಪ ಕೇವಲ ಗ್ಲಾಮ್ ಪಾತ್ರಕ್ಕೆ ಒಪ್ಪಿಕೊಂಡರು ಎಂಬ ಮಾತು ಕೇಳಿಬಂದಿತ್ತು. ಇದೀಗ ಮತ್ತೆ ಕೀರ್ತಿ ಸುದ್ದಿಯಲ್ಲಿದ್ದು, ಇದೀಗ ಮಹಾನಟಿಯ ನಂತರ ಮೊದಲ ತೆಲುಗು ಚಿತ್ರಕ್ಕೆ ಆಕೆ ಸಹಿ ಹಾಕುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನಲಾಗುತ್ತಿದೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ಕೀರ್ತಿ

ನಟಿ ಸಾವಿತ್ರಿ ಬಯೋಪಿಕ್ ‘ಮಹಾನಟಿ’ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯ್ತು. ನಟಿಯ ಸಿನಿ ಹಾಗೂ ವೈಯಕ್ತಿಕ ಬದುಕನ್ನು ತೋರಿಸಿಕೊಟ್ಟ ಈ ಸಿನಿಮಾದಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿ ಕೀರ್ತಿ ಅಮೋಘ ಅಭಿನಯ ನೀಡಿದರು. ಇದಾದ ಬಳಿಕ ತಮಿಳಿನ ‘ಸರ್ಕಾರ್’ ಚಿತ್ರದಲ್ಲಿ ನಟಿಸಿರುವ ಕೀರ್ತಿ ಕೈಯಲ್ಲಿ, ಅನೇಕ ತಮಿಳು ಚಿತ್ರಗಳಿವೆ. ಇದರ ಮಧ್ಯೆ ಮಹಾನಟಿ ಬಳಿಕ ಮತ್ತೊಮ್ಮೆ ತೆಲುಗಿನ ಚಿತ್ರಕ್ಕೆ ಆಕೆ ಸಹಿ ಹಾಕಿದ್ದು, ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನಲಾಗುತ್ತಿದೆ. ಈಸ್ಟ್- ಕೋಸ್ಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಿತ್ರಕ್ಕೆ ನರೇಂದ್ರ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಬಹುತೇಕ ಭಾಗ ಅಮೆರಿಕಾದಲ್ಲಿ ಚಿತ್ರೀಕರಣಗೊಳ್ಳಲಿದ್ದು, ಫೆಬ್ರವರಿ ತಿಂಗಳಿನಿಂದ ಏಪ್ರಿಲ್ ವರೆಗೆ ಅಮೆರಿಕಾದಲ್ಲೇ ಚಿತ್ರತಂಡ ಬೀಡುಬಿಡಲಿದೆಯಂತೆ. ಕಲ್ಯಾಣಿ ಮಲ್ಲಿಕ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

#keerthysuresh #tollywood #keerthysureshmoviesj #telugumovies #balkaninews

Tags