ಸುದ್ದಿಗಳು

‘ಮಹಾನಟಿ’ ಚಿತ್ರ ಈ ಬೆಡಗಿಯ ಸಿನಿ ಬದುಕಿಗೆ ಹೊಡೆತ ನೀಡಿತೆ…?

ಹೈದ್ರಾಬಾದ್, ಜ.17:

ಮಲೆಯಾಳಂ ಬ್ಯೂಟಿ ಕೀರ್ತಿ ಸುರೇಶ್ ‘ಮಹಾನಟಿ’ ಚಿತ್ರಕ್ಕಿಂತ ಮೊದಲು ಹಲವು ಚಿತ್ರಗಳಲ್ಲಿ ನಟಿಸಿದರೂ , ಆಕೆಗೆ ನೇಮ್ ಹಾಗೂ ಫೇಮ್ ತಂದುಕೊಟ್ಟಿದ್ದು ಮಹಾನಟಿ ಬಯೋಪಿಕ್. ಚಿತ್ರದಲ್ಲಿನ ಆಕೆಯ ನಟನೆ ಎಲ್ಲರಿಗೂ ಇಷ್ಟವಾಗಿದ್ದೂ ಮಾತ್ರವಲ್ಲ, ಕೀರ್ತಿ ಸುರೇಶ್ ಅವರನ್ನು ಚಿತ್ರರಂಗದಲ್ಲಿ ಬೇರೆಯದ್ದೇ ಆದ ಸ್ಥಾನಕ್ಕೆ ತಂದುಕೂರಿಸಿದೆ. ಚಿತ್ರ ಬ್ಲಾಗ್ ಬಸ್ಟರ್ ಆಗಿದ್ದು ಒಂದೆಡೆಯಾದರೆ ಕೋಟಿ ಕೋಟಿ ಬಾಚಿಕೊಂಡ ಸಿನಿಮಾದ ನಂತರ, ಕೀರ್ತಿ ಸುರೇಶ್ ಗೆ ಇದೀಗ ಸಂಕಷ್ಟವೊಂದು ಬಂದೊಂದಿಗೆ.

ಮಹಾನಟಿಯಂತಹ ವಿಭಿನ್ನ ಹಾಗೂ ಗಟ್ಟಿಯಾದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಂತರ, ಅಂತಹ ನಟಿಯರು ಸಿನಿಜೀವನದಲ್ಲಿ ಸಿಕ್ಕಾಪಟ್ಟೆ ಜಾಗೃತರಾಗಬೇಕಾಗುತ್ತದೆ. ತಮ್ಮದೇ ಆದ ಜವಾಬ್ದಾರಿಯಿಂದ ಅವರು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಮಹತ್ತರವಾದ ಜವಾಬ್ದಾರಿಯೊಂದು ಗೊತ್ತೋ ಗೊತ್ತಿಲ್ಲದೆಯೋ ಅವರ ಹೆಗಲ ಮೇಲೆ ಬಂದುಬೀಳುತ್ತದೆ. ಇದೀಗ ಕೀರ್ತಿ ಸುರೇಶ್ ಗೂ ಅಂತಹದ್ದೆ ಸಂಕಷ್ಟ ಎದುರಾಗಿದೆ.

ಗ್ಲಾಮರ್ ಪಾತ್ರಗಳಿಗೆ ನೋ ಎನ್ನುತ್ತಿದ್ದಾರೆ ಕೀರ್ತಿ ಸುರೇಶ್

ಮಹಾನಟಿ ಚಿತ್ರಕ್ಕಿಂತ ಮುನ್ನ ಕೀರ್ತಿ ಸುರೇಶ್ ಬಂದ ಪಾತ್ರಗಳನ್ನ  ಸುಲಭವಾಗಿ ಒಪ್ಪುತ್ತಿದ್ದರು. ಆದರೆ ಮಹಾನಟಿ ಸೂಪರ್ ಹಿಟ್ ಆದ ಬಳಿಕ ಆಕೆಯ ಆಯ್ಕೆಗಳು ಬದಲಾಗಿದೆ. ಗ್ಲಾಮರ್ ಪಾತ್ರಕ್ಕೆ ಆಕೆ ನೋ ಎನ್ನುತ್ತಿದ್ದಾರೆ. ಹೀಗಾಗಿ ಮಹಾನಟಿ ಚಿತ್ರ ಬಿಡುಗಡೆಯಾಗಿ ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ಕೀರ್ತಿ ಯಾವುದೇ ಟಾಲಿವುಡ್ ಚಿತ್ರಗಳಿಗೆ ಸಹಿ ಹಾಕಿಲ್ಲ. ಮಹಾನಟಿಯ ಫೇಮ್ ನಿಂದಾಗಿ ಇದೀಗ ಸ್ಟಾರ್ ನಟರು ಭಯಗೊಂಡಿದ್ದು, ಆಕೆ ಗ್ಲಾಮರ್ ಪಾತ್ರಗಳನ್ನು ನಿರ್ವಹಿಸುತ್ತಿಲ್ಲ. ಹೀಗಾಗಿ ಚಿತ್ರದಲ್ಲಿ ಆಕೆಯನ್ನು ಹಾಕಿಕೊಳ್ಳಲು ಯಾವುದೇ ನಟರು ಹಾಗೂ ನಿರ್ದೇಶಕರು ಮನಸ್ಸು ಮಾಡುತ್ತಿಲ್ಲವಂತೆ. ಇದೇ ಕಾರಣಕ್ಕಾಗಿ ಆಕೆಯ ಕೈಯಲ್ಲಿ ಯಾವುದೇ ತೆಲುಗು ಚಿತ್ರಗಳಿಲ್ಲವಂತೆ. ಇತ್ತೀಚೆಗೆ ಕೀರ್ತಿ ಸುರೇಶ್ ಸಹಿ ಹಾಕಿದ ಚಿತ್ರವೂ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇಲ್ಲಿ ಗ್ಲಾಮರ್ ಗೆ ಅವಕಾಶವಿಲ್ಲ. ಅಂದಹಾಗೆ ಮಹಿಳಾ ಪ್ರಧಾನ ಪಾತ್ರಗಳನ್ನು ಇಷ್ಟು ಬೇಗ ಒಪ್ಪಿದ್ದು ಕೂಡ ಆಕೆಯ ಸಿನಿ ಜೀವನಕ್ಕೆ ಒಂದು ಮೈನಸ್ ಪಾಯಿಂಟ್ ಎಂದೇ ಹೇಳಲಾಗುತ್ತಿದೆ. ನೋಡೋಣ ಮುಂದಿನ ದಿನಗಳಲ್ಲಿ ಕೀರ್ತಿ ಯಾವ ರೀತಿಯ ಪಾತ್ರಗಳನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

#keerthysuresh #tollywood #mahanatiaskeerthysuresh #tollywoodmovies #keerthysureshmovies #balkaninews

 

Tags