ಸುದ್ದಿಗಳು

ಕೀರ್ತಿ ಸುರೇಶ್ ನಡೆ ಕಂಡು ಸಂತೋಷಪಟ್ಟ ಮೆಗಾಸ್ಟಾರ್

ನಟಿ ಕೀರ್ತಿ ಸುರೇಶ್ ದೋಹಾದಲ್ಲಿ ನಡೆದ ಪ್ರತಿಷ್ಠಿತ ‘ಸೈಮಾ ಪ್ರಶಸ್ತಿ 2019’ ಪ್ರದಾನ ಸಮಾರಂಭದಲ್ಲಿ ‘ಮಹಾನಟಿ’ ಚಿತ್ರದ ಅದ್ಭುತ ಅಭಿನಯಕ್ಕಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರು.ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು. (ಇನ್ನೊಬ್ಬರು ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್).

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೆಗಾಸ್ಟಾರ್ ಇದ್ದ ಕಡೆಗೆ ಹೆಜ್ಜೆ ಹಾಕಿದ ಕೀರ್ತಿ ಸುರೇಶ್ ಅವರ ಹತ್ತಿರ ಹೋಗಿ ಅನೌಪಚಾರಿಕ ಸಂಭಾಷಣೆ ನಡೆಸಿದ್ದಾರೆ. ಇದೀಗ ‘ಸೈರಾ’ ನಟ ಕೀರ್ತಿ ವಿನಮ್ರತೆ ನೋಡಿ ಸಂತೋಷಪಟ್ಟಿದ್ದಾರೆ.

ಫೋಟೋದಲ್ಲಿ ಕೀರ್ತಿಯವರ ಬಾಡಿ ಲಾಂಗ್ವೇಜ್ ನೋಡಿದರೆ ಚಿರು ಅವರನ್ನು ಭೇಟಿಯಾದಾಗ ಸಿಕ್ಕಾಪಟ್ಟೆ ಉತ್ಸುಕತೆಯಿಂದ ಇರುವಂತೆ ಕಾಣುತ್ತದೆ. ಇತ್ತೀಚೆಗೆ, ‘ಮಹಾನಟಿ’ ಚಿತ್ರದಲ್ಲಿ ಸಾವಿತ್ರಿ ಪಾತ್ರಕ್ಕಾಗಿ ಕೀರ್ತಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

‘ಸಾಹೋ’ ಗೇಮ್ ಮಕ್ಕಳಿಗಾಗಿ ಅಲ್ಲ!!

#balkaninews #keerthysuresh # SIIMAawards

Tags