ಸುದ್ದಿಗಳು

‘ಮಹಾನಟಿ’ ಗೆ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಆಸೆಯಂತೆ!!

ಕೀರ್ತಿ ಕನ್ನಡಕ್ಕೆ ಬಂದರೆ ಯಾರ ಜೊತೆ ತೆರೆ ಹಂಚಿಕೊಳ್ಳುತ್ತಾರೆ..

 ಮಹಾನಟಿ ಪಾತ್ರದಲ್ಲಿನ ನನ್ನ ಅಭಿನಯಕ್ಕೆ ಇಲ್ಲಿನ ಜನರು ಅತ್ಯುತ್ತಮ ಪ್ರತಿಕ್ರಿಯೆ

ಬೆಂಗಳೂರು,ಸೆ.04: ‘ಮಹಾನಟಿ’ ಚಿತ್ರದಲ್ಲಿ ಟಾಲಿವುಡ್‌ನ ಲೆಜೆಂಡ್ ನಟಿ ಸಾವಿತ್ರಿ ಪಾತ್ರದಲ್ಲಿ ಅಭಿನಯಿಸಿ ಎಲ್ಲರನ್ನೂ ದಿಗ್ಬ್ರಮೆಗೊಳಿಸುವಂತೆ ಮಾಡಿದ್ದಳು ನಟಿ ಕೀರ್ತಿ ಸುರೇಶ್. ಈಗ ಕೀರ್ತಿಗೆ ಚಂದನವನಕ್ಕೆ ಕಾಲಿಡುವ ಆಸೆಯಾಗಿದೆಯಂತೆ..

Related image

 ಕನ್ನಡದಲ್ಲಿ ನಟಿಸುವ ಆಸೆ..

ಹೌದು. ಇತ್ತೀಚೆಗೆ ಬೆಂಗಳೂರಿಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ಬಂದಿದ್ದ ನಟಿ ಕೀರ್ತಿ ಸುರೇಶ್, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಮಹಾನಟಿ ಪಾತ್ರದಲ್ಲಿನ ನನ್ನ ಅಭಿನಯಕ್ಕೆ ಇಲ್ಲಿನ ಜನರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ಕನ್ನಡದಲ್ಲಿ ನಟಿಸಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಆಫರ್‌ ಬಂದರೆ ಖಂಡಿತ ಅಭಿನಯಿಸುತ್ತೇನೆ. ನನಗೆ ಭಾಷೆಗಿಂತ ಪಾತ್ರ ಹಾಗೂ ಕಥೆ ಮುಖ್ಯ”ಎಂದಿದ್ದಾರೆ.

ಒಬ್ಬ ಅದ್ಭುತ ಕಲಾವಿದನಿಗೆ ಯಾವ ಭಾಷೆ ಅನ್ನೋದು ಮುಖ್ಯ ಆಗಲ್ಲ. ಈಗಾಗಲೇ ಹಲವಾರು ನಟಿಯರು ಟಾಲಿವುಡ್ ನಿಂದ ಚಂದನವನಕ್ಕೆ ಕಾಲಿಟ್ಟಿ ಉದಾಹರಣೆ ಹಲವಾರು ಇದೆ.ಈಗ ಕೀರ್ತಿ ಮಾತನ್ನು ಕೇಳಿ ಕನ್ನಡದ ಹಲವು  ನಿರ್ದೇಶಕರು, ನಿರ್ಮಾಪಕರು ಮಹಾನಟಿಯನ್ನ ಇಲ್ಲಿಗೆ ಕರೆತರುತ್ತಾರೋ ಕಾದುನೋಡಬೇಕು. ಕೀರ್ತಿ ಕನ್ನಡಕ್ಕೆ ಬಂದರೆ ಯಾರ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎಮದು ಕಾದು ನೋಡಬೇಕಿದೆ..

Related image

 

Tags