ಸುದ್ದಿಗಳು

ಮೋಡಿ ಮಾಡುತ್ತಿರುವ ‘ಕೆಂಪೇಗೌಡ-2’ ಚಿತ್ರದ ಹಾಡುಗಳು

‘ಕೆಂಪೇಗೌಡ-2’ ಕೋಮಲ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ. ಈ ಹಿಂದೆ ಕಾಮಿಡಿ, ಲವ್ ಸೆಂಟಿಮೆಂಟ್ ಜಾನರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರೀಗ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸುವುದಕ್ಕೆ ತಯಾರಾಗಿದ್ದಾರೆ.

ಈಗ ಈ ಚಿತ್ರದ ಡ್ಯುಯೆಟ್ ಸಾಂಗ್ ನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಕೇಳುಗರಿಂದ ಮೋಡಿ ಮಾಡುತ್ತಿದೆ. ವಿಶೇಷವೆಂದರೆ, ಈ ಚಿತ್ರದ ಮೂರು ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಬಗ್ಗೆ ನಟ ಜಗ್ಗೇಶ್ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ರಿಲೀಸ್ ಆಗಿರುವ ‘ಉಸಿರೇ..’ ಎಂಬ ಸಾಲಿನ ಹಾಡನ್ನು ಧನಂಜಯ್ ರಚಿಸಿದ್ದು, ಹಾಡಿಗೆ ವರುಣ್ ಉಣ್ಣಿ ಹಾಗೂ ಸುಪ್ರಿಯಾ ಲೋಹಿತ್ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ವರುಣ್ ಉಣ್ಣಿ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆಯವರು ಈ ಹಾಡುಗಳನ್ನು ಹೊರ ತಂದಿದ್ದಾರೆ.

ಇಷ್ಟು ದಿನಗಳ ಕಾಲ ಪಂಚಿಂಗ್ ಡೈಲಾಗ್ ಇರುವ ಟ್ರೈಲರ್ ಹಾಗೂ ಪೋಸ್ಟರ್ ನಿಂದಲೇ ಹೊಸ ಕಹಾನಿ ಶುರುಮಾಡಿದ್ದ ಚಿತ್ರತಂಡ ಇದೀಗ ಹಾಡುಗಳನ್ನು ಬಿಡುಗಡೆ ಮಾಡಿ ಕಮಾಲ್ ಮಾಡುತ್ತಿದೆ.

ಅಂದ ಹಾಗೆ ‘ಕೆಂಪೇಗೌಡ’ ಹೆಸರನ್ನು ಕೇಳಿದಾಗ ಸುದೀಪ್, ರಾಗಿಣಿ ಅಭಿನಯದ ಸಿನಿಮಾ ನೆನಪಾಗುತ್ತದೆ. ಹಾಗಂತಾ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವೆಂದು ಚಿತ್ರತಂಡ ಈಗಾಗಲೇ ಸ್ಪಷ್ಟಪಡಿಸಿದೆ.

ಇನ್ನು ಚಿತ್ರದಲ್ಲಿ ಕೋಮಲ್ ಕುಮಾರ್ ರೊಂದಿಗೆ ರಿಷಿಕಾ ಶರ್ಮಾ, ಲೂಸ್ ಮಾದ ಯೋಗಿ ಹಾಗೂ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ಬಣ್ಣ ಹಚ್ಚಿದ್ದು ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಕ್ಕೆ ಶಂಕರೇಗೌಡ ನಿರ್ದೇಶನವಿದೆ.

#kempegowda-2, #movie, #songs, #realsed, #balkaninews #komalkumar, #jaggesh, #filmnews, #kannadasuddigalu

Tags