ಸುದ್ದಿಗಳು

‘ಕೆಂಪೇಗೌಡ’ ನಿಗೆ ಇಂದು ಎಂಟು ವರ್ಷ!!

ಬೆಂಗಳೂರು,ಮಾ.10: ನಟ ಸುದೀಪ್‌ ಕೆರಿಯರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್‌ ಕೊಟ್ಟಸಿನಿಮಾ ‘ಕೆಂಪೇಗೌಡ’. ಈ ಚಿತ್ರದ ಮುಂದುವರಿದ ಭಾಗ ಬರುತ್ತದೆಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು.. 2012 ರಲ್ಲಿ ಬಿಡುಗಡೆ ಆದ ‘ಕೆಂಪೇಗೌಡ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುದೀಪ್ ಖಾಕಿ ಖದರ್ ಹಾಗೂ ಅವರ ಮೀಸೆ ಅಭಿಮಾನಿಗಳನ್ನ ಸೆಳೆದಿತ್ತು. ‘ಕೆಂಪೇಗೌಡ’ ಸ್ಟೈಲ್ ನಲ್ಲೇ ಹಲವರು ಮೀಸೆ ಕೂಡ ಬಿಟ್ಟಿದ್ದರು.

Image result for kempegowda movie

ಕಿಚ್ಚನ ಟ್ವೀಟ್

ಈ ಕಟೌಟ್ ಎದ್ದು ನಿನ್ನೆಗೆ ಎಂಟು ವರ್ಷವಾಗಿದೆ.. ಅಷ್ಟೇ ಅಲ್ಲದೆ ಮಾ.11.2012 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.. ಕಿಚ್ಚ ಸುದೀಪ್ ಎದುರು ರಾಗಿಣಿ ದ್ವಿವೇದಿ ನಾಯಕಿಯಾಗಿ ಅಭಿನಯಿಸಿದ್ದರು..

“ನನ್ನ ಚಿತ್ರ ಕೆಂಪೇಗೌಡಕ್ಕಿಂತ ಹೆಚ್ಚಾಗಿ, @ ಅರ್ಜುನ್ ಜನ್ಯಾ, ಎನ್.ಜೆ ರವಿಶಂಕರ್ ಅವರು ತಮ್ಮ ಜರ್ನಿ ಶುರ ಮಾಡಿದಾಗಿನಿಂದ ಹಿಡಿದು ಇಂದಿನವರೆಗೂ ಅವರ ಸಂಪೂರ್ಣ ಪ್ರಾಮಾಣಿಕತೆಯಿಂದ ಸಾಗಿದ್ದಾರೆ. ಅವರನ್ನು ಸ್ವೀಕರಿಸಿದ ಎಲ್ಲಾ ಸ್ನೇಹಿತರಿಗೂ ತುಂಬು ಹೃದಯದ ಧನ್ಯವಾದಗಳು”.. ಎಂದು ಟ್ವೀಟ್ ಮಾಡಿದ್ದಾರೆ

ಸಿಂಗಮ್ ಚಿತ್ರದ ರಿಮೇಕ್

ಈ ಚಲನಚಿತ್ರವನ್ನು ಸುದೀಪ್ ನಿರ್ದೇಶಿಸಿದ್ದು ಮತ್ತು ಶಂಕರ್ ಗೌಡ ಅವರು ನಿರ್ಮಿಸಿದರು.  ಅನುಷ್ಕಾ ಶೆಟ್ಟಿ ನಟಿಸಿರುವ ಹರಿ ನಿರ್ದೇಶಿಸಿದ ತಮಿಳು ಸಿನಿಮಾ ಚಿತ್ರ ಸಿಂಗಮ್ ಚಿತ್ರದ ರಿಮೇಕ್ ಆಗಿದೆ.

 

ಅಂಬಾನಿ ಪುತ್ರನ ಮದುವೆಯಲ್ಲಿ ಬಾಲಿವುಡ್ ಮಂದಿ!!

Tags