ಸುದ್ದಿಗಳು

ಕೇರಳ ಪ್ರವಾಹ ಸಂತ್ರಸ್ತರಿಗೆ 1 ಕೋಟಿ ರೂ. ನೀಡಿದ ‘ಸಂಗೀತ ಮಾಂತ್ರಿಕ’..

ಕೇರಳಕ್ಕೆ ನಾನು ಮತ್ತು ನನ್ನ ತಂಡ 1 ಕೋಟಿ ರೂ. ನೀಡುತ್ತಿದ್ದೇವೆ..

ಕಳೆದ 100 ವರ್ಷಗಳಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ 500 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 20 ಸಾವಿರ ಕೋಟಿ ರೂ.ನಷ್ಟು ಆಸ್ತಿ ನಾಶವಾಗಿದೆ..

ಮುಂಬೈ,ಸೆ.04: ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​.ರೆಹಮಾನ್  ಯಾರಿಗೆ ಗೊತ್ತಿಲ್ಲ ಹೇಳಿ? ಈಗ ರೆಹಮಾನ್ ಕೇರಳ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂ. ಸಹಾಯಧನ ನೀಡಿದ್ದಾರೆ.

Image result for rahman]

ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳ ಈಗ ಸಹಜ ಸ್ಥತಿಗೆ ಬಂದಿದೆ. ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳಕ್ಕೆ ಎಲ್ಲೆಡೆಯಿಂದ ಪರಿಹಾರ ಧನ ಬಂದಿದೆ.

ಕೇರಳ ಸಂತ್ರಸ್ತರಿಗೆ 1 ಕೋಟಿ.ರೂ..

ಕಳೆದ 100 ವರ್ಷಗಳಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ 500 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, 20 ಸಾವಿರ ಕೋಟಿ ರೂ.ನಷ್ಟು ಆಸ್ತಿ ನಾಶವಾಗಿದೆ. ಪ್ರವಾಹದಿಂದ ನಲುಗುತ್ತಿರುವ ಕೇರಳಕ್ಕೆ ನಾನು ಮತ್ತು ನನ್ನ ತಂಡ 1 ಕೋಟಿ ರೂ. ನೀಡುತ್ತಿದ್ದೇವೆ ಎಂದು ರೆಹಮಾನ್ ಟ್ವಿಟ್ ಮಾಡಿದ್ದಾರೆ. ರೆಹಮಾನ್ ಸದ್ಯಕ್ಕೆ ಅಮೆರಿಕಾದ ವಾಷಿಂಗ್ಟನ್​​​​​ನಲ್ಲಿ ಪ್ರವಾಸದಲ್ಲಿದ್ದಾರೆ.

ಸೆಪ್ಟೆಂಬರ್ 5 ರಂದು ರೆಹಮಾನ್ ಭಾರತಕ್ಕೆ ಹಿಂತಿರುಗಿ ಮಣಿರತ್ನಂ ಹೊಸ ಸಿನಿಮಾ ‘ಚೆಕ್ಕ ಚಿವಂತ ವಾನಂ’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಸ್ಟೇಜ್ ಮೇಲೆ ಪರ್ಫಾಮ್ ಮಾಡಲಿದ್ದಾರೆ. ಕೇರಳ ಸಂತ್ರಸ್ತರಿಗಾಗಿ ಕೂಡಾ ವಿಶೇಷ ಹಾಡೊಂದನ್ನು ಅವರು ಅರ್ಪಿಸಲಿದ್ದಾರೆ. ಈ ಹಿಂದೆ ಕೇರಳಿಗರಿಗೆ  ಒಮದು ಹಾಡನ್ನು ಬರೆದಿದ್ದರು.. ರೆಹಮಾನ್ ನೆರೆ ಸಂತ್ರಸ್ತರಿಗೆ ದೊಡ್ಡ ಮೊತ್ತವನ್ನು ಸಹಾಯ ಮಾಡುತ್ತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

Tags