ಸುದ್ದಿಗಳು

‘ಜರ್ಸಿ’ ಟ್ರೈಲರ್!! ಕ್ರಿಕೆಟಿಗನ ಆಟಗಾರನಾಗಿ ನ್ಯಾಚುರಲ್ ಸ್ಟಾರ್!!!

ಹೈದರಾಬಾದ್,ಜ.12: ನ್ಯಾಚುರಲ್ ಸ್ಟಾರ್ ಮುಂಬರುವ ಚಿತ್ರ ಚಿತ್ರ ಜರ್ಸಿ ಟೀಸರ್ ಇಂದು ಬಿಡುಗಡೆಯಾಗಿದೆ.. ಇದು ಕ್ರಿಕೆಟ್ ಹಿನ್ನೆಲೆಯನ್ನು ಹೊಂದಿದೆ.

ತನ್ನ ಕನಸುಗಳತ್ತ ಅರ್ಜುನ

ನಾನಿ ಈ ಚಿತ್ರದಲ್ಲಿ 36 ವರ್ಷ ವಯಸ್ಸಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಒಬ್ಬ ಕ್ರಿಕೆಟಿಗನಾಗುವ ಅವನ ಮಹತ್ವಾಕಾಂಕ್ಷೆಯು ಹಾಗೆಯೇ ಉಳಿದುಕೊಂಡಿರುತ್ತದೆ. ಆದರೆ ನಂತರ ಅರ್ಜುನ್ (ನಾನಿ) ತನ್ನ ಕನಸುಗಳನ್ನು ಅಟ್ಟಿಸಿಕೊಂಡು ಹೋಗುತ್ತಾನೆ ಮತ್ತು ಅವನ ಸುತ್ತಲಿನ ಜನರು ಅವನನ್ನು ಪ್ರೋತ್ಸಾಹಿಸದಿದ್ದರೂ ಸ್ವತಃ ಪ್ರೇರೇಪಿಸಿ ಮುಂದೆ ಬರುತ್ತಾನೆ.

ಅರ್ಜುನನ ಡೈಲಾಗ್

“ಆಪೆಸಿ ಒಡಿಪೊಯಿನಾ ವಾಡು ಉನಾಡು ಕಾನಿ, ಪ್ರಯತ್ನಿಸ್ತಾ ಒಡಿಪಾಯ್ಯ ವಾಡು ಲೆದು,” ಎಂದು ಅರ್ಜುನನ ಡೈಲಾಗ್ ಸಖತ್ ಆಗಿದೆ..

 ಅನಿರುದ್ ರವಿಂಚಂದರ್ ಅವರ ಹಿನ್ನೆಲೆ ಸಂಗೀತ

ಗೌತಮ್ ಟಿನ್ನನುರಿಯವರು ಬರೆದು ನಿರ್ದೇಶಿಸಿದ್ದಾರೆ, ಅನಿರುದ್ ರವಿಂಚಂದರ್ ಅವರ ಹಿನ್ನೆಲೆ ಸಂಗೀತ, ಸಾನು ಜಾನ್ ವರ್ಘೀಸ್ ಅವರ ಛಾಯಾಗ್ರಹಣವು ಈ  ಚಿತ್ರಕ್ಕಿದ್ದು ಈ ಟೀಸರ್ ಗೆ ಪ್ಲಸ್ ಪಾಯಿಂಟ್ ಆಗಿದೆ. ‘ಜರ್ಸಿ’ ಸಿತಾರ ಎಂಟರ್ಟೈನ್ಮೆಂಟ್ಸ್ ನಿರ್ಮಿಸಿ ಏಪ್ರಿಲ್ನಲ್ಲಿ ಬಿಡುಗಡೆಯಾಗುತ್ತಿದೆ.

 

Tags