ಸುದ್ದಿಗಳು

ಶತದಿನದ ಸಂಭ್ರಮದಲ್ಲಿ ‘ಕೆ.ಜಿ.ಎಫ್’

ಸಂಭ್ರಮ ಆಚರಿಸಿದ ಚಿತ್ರತಂಡ

ಬೆಂಗಳೂರು.ಮಾ.30: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಸಿನಿಮಾ ಇವತ್ತು ಯಶಸ್ವಿ 100 ದಿನಗಳನ್ನು ಪೂರೈಸಿದೆ. ಇಡೀ ಸೌತ್ ಇಂಡಿಯಾ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ದಾಖಲೆ ಬರೆದ ಈ ಚಿತ್ರವು , ಕನ್ನಡ ಚಿತ್ರರಂಗದ ಕ್ವಾಲಿಟಿ ಏನು ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

ವಿಶೇಷವೆಂದರೆ, ಈಗಿನ ದಿನಮಾನಗಳಲ್ಲಿ 50, 100 ದಿನವೆಂಬುವುದು ದೂರವೆಂಬುದು ದೂರದ ಮಾತಾಗಿದೆ. ಏಕೆಂದರೆ, ಈಗ ಒಂದು ಚಿತ್ರವು ಗಳಿಸುವ ಕಲೆಕ್ಷನ್ ಆಧಾರದ ಮೇಲೆ ಆ ಚಿತ್ರವನ್ನು ಅಳೆಯಲಾಗುತ್ತಿದೆ. ಆದರೆ ‘ಕೆ.ಜಿ.ಎಫ್’ ಸಿನಿಮಾ ಭರ್ಜರಿ ಗಳಿಕೆಯೊಂದಿಗೆ ಶತದಿನವನ್ನು ಪೂರೈಸಿದೆ.

ಕಳೆದ ವರ್ಷ ಡಿಸೆಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ ‘ಕೆ.ಜಿ.ಎಫ್’ ಇಂದು 100 ದಿನಗಳನ್ನು ಪೂರೈಸಿದೆ. ಈ ಚಿತ್ರವು ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಸುಮಾರು 1200 ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ಕನ್ನಡಿಗರು ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಸಿಕರು ತಲೆಬಾಗಿದ್ದರು.

ಚಿತ್ರದಲ್ಲಿ ನಟಿಸಿರುವ ರಾಕಿಭಾಯ್ ಪಾತ್ರ, ಖಳನಟರ ಆರ್ಭಟ, ತಾಯಿ ಮಗನ ಸೆಂಟಿಮೆಂಟ್, ಅನಂತ್ ನಾಗ್ ಮತ್ತು ಮಾಳವಿಕಾ ಅವರ ನಿರೂಪಣೆ ಶೈಲಿ, ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಕ್ಯಾಮರಾ ಕೈಚಳಕ, ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ ಹೀಗೆ ‘ಕೆಜಿಎಫ್’ ಚಿತ್ರದ ಪ್ರತಿಯೊಂದು ಅಂಶವು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು.


ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ ಈ ಸಿನಿಮಾ ಪ್ರದರ್ಶನವಾಗಿದೆ. ವಿಶೇಷವೆಂದರೆ, ಇಂದು ಮತ್ತು ನಾಳೆ ಎರಡು ದಿನ ಕಲರ್ಸ್ ಚಾನೆಲ್ ನಲ್ಲಿ ‘ಕೆಜಿಎಫ್’ ಪ್ರಸಾರವಾಗುತ್ತಿದೆ. ಇನ್ನು ‘ಕೆಜಿಎಫ್ ಪಾರ್ಟ್-2’ ಕೂಡ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ.

‘ಪಂಚತಂತ್ರ’ ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್

#kgf, #100days, #balkaninews #filmnews, #kannadasuddigalu, #yash, #srinidhishetty

Tags