ಸುದ್ದಿಗಳು

ಕೆಜಿಎಫ್ 2 ಹವಾ!! ಫ್ಯಾನ್ ಮೇಡ್ ಪೋಸ್ಟರ್ಸ್!!

ಬೆಂಗಳೂರು,ಮಾ.25: ಕೆಜಿಎಫ್’ ಚಿತ್ರ ಕರ್ನಾಟಕ ಮಾತ್ರವಲ್ಲದೇ ವಿಶ್ವದಾದ್ಯಂತ ಯಾವ ಮಟ್ಟದಲ್ಲಿ ಸೌಂಡ್ ಮಾಡಿದೆಯೆಂದು ನಿಮಗೆಲ್ಲ ಗೊತ್ತೇ ಇದೆ. ಈ ‘ಕೆಜಿಎಫ್’ ಚಿತ್ರದ ಬಳಿಕ ಯಶ್ ಚಾಪ್ಟರ್- 2  ಗೆ ಸಿದ್ದವಾಗಿದೆ. ಈಗಾಗಲೇ ಸಿನಿಮಾ ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆಗಳು, ಜಾಗ ಕೂಡ ಗೊತ್ತು ಮಾಡಲಾಗಿದೆ. ಕೆಜಿಎಫ್ ಚಾಪ್ಟರ್-2 ಪ್ರೀ ಪ್ರೋಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ ಎನ್ನಲಾಗಿದೆ..  ಚಿತ್ರತಂಡ ಆಧಿಕೃತವಾಗಿ ಚಿತ್ರದ ಮುಹೂರ್ತವನ್ನು ನೇರವೇರಿಸಿತ್ತು..

ಬಾಲಿವುಡ್ ನಟ ಸಂಜಯ್ ದತ್

ಇನ್ನು ಚಾಪ್ಟರ್ 2 ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಅನ್ನುವ ಮಾಹಿತಿ ಸದ್ಯ ಗಾಂಧಿನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.. ಈ ಟಾಕ್‌ನಿಂದ ‘ಕೆಜಿಎಫ್’ ತಾರಾಗಣದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಲಿದೆ.. ಹೌದು, ಈಗಾಗಲೇ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡ ಸಂಜಯ್ ದತ್ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಹೇಳುವ ಜೊತೆಗೆ ಕೆಲವು ದೃಶ್ಯಗಳನ್ನು ಕೂಡಾ ತೋರಿಸಿದ್ದಾರೆ..

ಕೆಜಿಎಫ್ ಚಾಪ್ಟರ್​-2 ಫ್ಯಾನ್ ಮೇಡ್ ಪೋಸ್ಟರ್

ಈಗಾಗಲೇ ಎಲ್ಲೆಡೆ ಕೆಜಿಎಫ್-2 ಹವಾ ಜೋರಾಗಿ ಹೊಸ ಅಲೆ ಶುರುವಾಗಿದ್ದು ಚಿತ್ರದ ಫ್ಯಾನ್​ ಮೇಡ್​ ಪೋಸ್ಟರ್ಸ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಭರ್ಜರಿಯಾಗಿ  ಹರಿದಾಡುತ್ತಿದೆ..ಏಪ್ರಿಲ್​ನಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.

ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್

 

 

Tags