ಸುದ್ದಿಗಳು

ಏನ್ ಗುರು!! ಕೆಜಿಎಫ್ 2 ಟ್ರೇಲರ್ !! ವಾಹ್ ವಾಹ್!!

ಯೂಟ್ಯೂಬ್ ನಲ್ಲಿ 2 ನೇ ಟ್ರೆಂಡಿಂಗ್  ಪಟ್ಟಿಯಲ್ಲಿ ಕೆಜಿಎಫ್ ನ ಹಾಡು

ಬೆಂಗಳೂರು,ಡಿ.5: ‘ಪವರ್ ಫುಲ್ ಪೀಪಲ್ ಕಮ್ ಫ್ರಂ ಪವರ್ ಫುಲ್ ಪ್ಲೇಸಸ್’ ಇದು ಅನಂತ್ ನಾಗ್ ಅವರ ಡೈಲಾಗ್. ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ‘ಕೆಜಿಎಫ್’ ಸಿನಿಮಾ ಇತ್ತೀಚೆಗಷ್ಟೆ ಒಂದು ಅತ್ಯದ್ಭುತ ಟ್ರೇಲರ್ ರಿಲೀಸ್ ಮಾಡಿತ್ತು.. , ಕನ್ನಡ ಸೇರಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್ ನಿರ್ವಣದ ‘ಕೆಜಿಎಫ್’ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗಿತ್ತು. ಇನ್ನು ಕೆಜಿಎಫ್ ಚಿತ್ರ 2 ನೇ ಟ್ರೇಲರ್ ಬಿಡುಗಡೆಯಾಗಿದೆ..

ಅಮ್ಮ ಮಗನ ಸೆಂಟಿಮೆಂಟ್

ಈ ಚಿತ್ರದಲ್ಲಿ ಅಮ್ಮ ಮಗನ ಸೆಂಟಿಮೆಂಟ್ ಇದ್ದು, ಅಮ್ಮ ಮಗನ ಕೈಯಿಂದ ಭಾಷೆ ತೆಗೆದುಕೊಳ್ಳುವ ದೃಶ್ಯ ಮನಕಲಕುವಂತಿದೆ.. ಇನ್ನು ಅನಂತ್ ನಾಗ್ ಅವರ ಡೈಲಾಗ್ ‘ಪವರ್ ಫುಲ್ ಪೀಪಲ್ ಕಮ್ ಫ್ರಂ ಪವರ್ ಫುಲ್ ಪ್ಲೇಸಸ್’ ಎಂದು ಹೇಳುವುದು ಎಲ್ಲವೂ ಸಖತ್ ಆಗಿದೆ..

ತಂತ್ರಜ್ಞರ ಕೈಚಳಕ,  ಬ್ಯಾಕ್ ಗ್ರೌಂಡ್ ಮ್ಯೂಸಿಕ್ ,ರಾಕಿಂಗ್ ಸ್ಟಾರ್ ಯಶ್‌ ಡೈಲಾಗ್ಸ್, ಪ್ರಶಾಂತ್‌ ನೀಲ್‌  ನಿರ್ದೇಶನ, ಹೊಂಬಾಳೆ ಫಿಲಂಸ್‌ ಪ್ರೊಡಕ್ಷನ್‌  ಅಬ್ಬಬ್ಬಾ !! ಹೇಳೋಕೆ ಪದಾನೆ ಸಿಗುತ್ತಿಲ್ಲ ಅಷ್ಟು ಅಚ್ಚುಕಟ್ಟಾಗಿ ಮುಗಿಸಿದ್ದಾರೆ..

ಅಭಿಮಾನಿಗಳು ಫುಲ್ ಖುಷ್

ಚಿತ್ರದ ಟ್ರೇಲರ್ ನೋಡಿದವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಹಾಗೂ ಕನ್ನಡದಲ್ಲಿ ಬಿಡುಗಡೆಯಾದ ಟ್ರೇಲರ್ ನನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.. ಈ ಹಿಂದೆ ಕೆಜಿಎಫ್ ಬರೆದಿರುವ ಸಾಧನೆಗೆ ಚಿತ್ರರಂಗದ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಜಿಎಫ್ ನ ಹಾಡು ಯೂಟ್ಯೂಬ್ ನಲ್ಲಿ 2 ನೇ ಟ್ರೆಂಡಿಂಗ್  ಪಟ್ಟಿಯಲ್ಲಿದೆ..

Tags