ಸುದ್ದಿಗಳು

ಹಿಂದಿ ‘ಕೆ.ಜಿ.ಎಫ್’ ಸಾಂಗ್ ನಲ್ಲಿ ‘ಜೋಕೆ’ ಇಲ್ಲ: ಹೊಸ ನಟಿಯೊಂದಿಗೆ ಮತ್ತೆ ಸಾಂಗ್ ಶೂಟ್…!!

ಚಿತ್ರದ ಬಿಡುಗಡೆಗೆ ಕೇವಲ 15 ದಿನಗಳು ಬಾಕಿ ಇರುವಾಗ ದಿಢೀರ್ ಅಂತ ಹೊಸ ನಿರ್ಧಾರ

ಬೆಂಗಳೂರು, ಡಿ.6: ಇನ್ನೇನು 15 ದಿನಗಳಷ್ಟೇ ಬಾಕಿ ಉಳಿದಿವೆ, ಯಶ್ ನಟನೆಯ ‘ಕೆ.ಜಿ.ಎಫ್’ ಕಣ್ತುಂಬಿಕೊಳ್ಳಲು. ಆದರೆ ಚಿತ್ರತಂಡದವರು ದಿಢೀರ್ ಅಂತ ಹೊಸದಾಗಿ ಚಿತ್ರದ ಹಾಡನ್ನು ಶೂಟ್ ಮಾಡಲು ನಿರ್ಧರಿಸಿದ್ದಾರೆ.

ಹಿಂದಿಯಲ್ಲಿಲ್ಲ ‘ಜೋಕೆ ನಾನು’

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ‘ಕೆ.ಜಿ.ಎಫ್’ ಚಿತ್ರದಲ್ಲಿ ನಾಯಕ ಯಶ್, ನಟಿ ತಮನ್ನಾರೊಂದಿಗೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದ ಯಶಸ್ವಿ ಗೀತೆಗಳಲ್ಲೊಂದಾದ ‘ಪರೋಪಕಾರಿ’ ಚಿತ್ರದ ‘ಜೋಕೆ ನಾನು..’ ಹಾಡನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿತ್ತು.

ಆದರೆ ಈ ಹಾಡನ್ನು ಮತ್ತು ತಮನ್ನಾ ನೃತ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ಹಿಂದಿ ಪ್ರೇಕ್ಷಕರಿಗಿಲ್ಲ. ಯಾಕೆಂದರೆ ಈ ಹಾಡಿನ ಬದಲಾಗಿ ಹೊಸದೊಂದು ಸಾಂಗ್, ಹಿಂದಿಯಲ್ಲಿ ಸಿದ್ಧವಾಗುತ್ತಿದೆ.

ಜೋಕೆ… ಬದಲಾಗಿ ಗಲಿ ಗಲಿ..!

‘ಕೆಜಿಎಫ್’ ಚಿತ್ರದ ಐಟಂ ಸಾಂಗ್ ಚಿತ್ರರಸಿಕರಲ್ಲಿ ಬಹಳಷ್ಟು ಕುತೂಹಲ ಕೆರಳಿಸಿತ್ತು. ಯಶ್- ತಮನ್ನಾ ಒಟ್ಟಿಗೆ ಕುಣಿದಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಐದು ಭಾಷೆಯಲ್ಲಿ ಈ ಸಿನಿಮಾ ಬರುತ್ತಿದ್ದ ಕಾರಣ ಬಹುಶಃ ಅದೇ ಹಾಡನ್ನು ಉಳಿಸಿಕೊಂಡಿದ್ದರು. ಆದರೆ ಇದೀಗ, ಹಿಂದಿಯಲ್ಲಿ ಈ ಹಾಡನ್ನು ಬದಲಾಯಿಸಲಾಗುತ್ತಿದೆ.ತಮನ್ನಾ ಬದಲಾಗಿ ಮೌನಿ ರಾಯ್

ಇನ್ನೇನು ಸಿನಿಮಾ ಬಿಡುಗಡೆಗೆ ಬಂದು ನಿಂತಿದೆ. ಇಂತಹ ಸಮಯದಲ್ಲಿಯೇ ಹಿಂದಿ ಅವತರಣಿಕೆಯಲ್ಲಿನ ಹಾಡಿಗೆ ತಮನ್ನಾ ಬದಲಾಗಿ ಬಾಲಿವುಡ್ ನಟಿ ಮೌನಿ ರಾಯ್, ಯಶ್ ಜೊತೆಗೆ ಹೆಜ್ಜೆ ಹಾಕಲಿದ್ದಾರೆ.ನಾಳೆಯೇ ಶೂಟಿಂಗ್

ಬಾಲಿವುಡ್ ನ ‘ತ್ರಿದೇವ್’ ಚಿತ್ರದ ‘ಗಲಿ ಗಲಿ ಮೇ…’ ಹಾಡನ್ನು ಇದೀಗ ರಿ-ಕ್ರಿಯೇಟ್ ಮಾಡಲಾಗುತ್ತಿದೆ. ಜಾಕಿ ಶ್ರಾಫ್ ಹಾಗೂ ಸಂಗೀತಾ ಬಿಜಲಾನಿ ಕಾಣಿಸಿಕೊಂಡಿದ್ದ ಈ ಹಾಡು ಸೂಪರ್ ಹಿಟ್ ಆಗಿತ್ತು. ಹೀಗಾಗಿ ಹಿಂದಿ ಅವತರಣಿಕೆಯಲ್ಲಿ ಈ ಹಾಡು ಬಳಸಲು ಮುಂದಾಗಿದೆ ಚಿತ್ರತಂಡ.

ತಮನ್ನಾ ಬದಲಾಗಿ ಬಾಲಿವುಡ್ ನಟಿ ಮೌನಿ ರಾಯ್ ಯಶ್ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ನಾಳೆಯಿಂದ ಮುಂಬೈನ ಗೊರೆಗಾಂವ್ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Tags