
ಸುದ್ದಿಗಳು
ಮುಂಬೈಯ ಬಾಲಿವುಡ್ ಸಿನಿಮಾ ತಾರೆಗಳ ಹುಟ್ಟುಹಬ್ಬದಲ್ಲೂ ಯಶ್ !! ಕೆಜಿಎಫ್ ಡೈಲಾಗ್ಸ್!
ಕೆಜಿಎಫ್’ ಗೆ ಬಾಲಿವುಡ್ ನಿಂದ ದೊರೆತ ತೆರೆದ ಕೈಗಳ ವಿನೂತ ಪ್ರಚಾರ!!!
ಮುಂಬೈ.ಡಿ.6: ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್’ ಹವಾ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬಾಲಿವುಡ್ನಲ್ಲೂ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಈಗಾಗಲೇ ಪಂಚಭಾಷೆಗಳಲ್ಲಿ ಬಿಡುಗೆಯಾಗಲು ಸಿದ್ದವಾಗಿದೆ. ‘ಕೆಜಿಎಫ್’ ತೆರೆಕಾಣಲು ಎರಡು ವಾರಗಳು ಮಾತ್ರ ಬಾಕಿ ಇದೆ..
‘ಎಕ್ಸೆಲ್ ಮೂವೀಸ್’
‘ಎಕ್ಸೆಲ್ ಮೂವೀಸ್’ ಯೂಟ್ಯೂಬ್ ಚಾನೆಲ್ನಿಂದ ಈಗ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.. ಆಶೀಶ್ ಚಂಚ್ಲಾನಿ ಹಾಗೂ ಅವರ ಟೀಂನೊಂದಿಗೆ ಯಶ್ ‘ಕೆಜಿಎಫ್’ ಚಿತ್ರದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನು ಆಶೀಶ್ ಸ್ನೇಹಿತರು, ಯಾರು ನಿನ್ನ ಹೊಸ ಗೆಳೆಯ ಎಂದು ಕೇಳುವಾಗ, ಈತ ನನ್ನ ಫ್ರೆಂಡ್ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳುತ್ತಾರೆ.. ಆಗ ಯಶ್, ಹೇ ಕಾಲ್ ಮಿ ‘ರಾಕಿ’ ಎಂದು ಖಡಕ್ ಆಗಿ ಹೇಳುತ್ತಾರೆ..
ಇಂದೇ ನನಗೆ ಕೋಲಾರದ ಗಣಿ ಸಿಕ್ಕಿದ್ದು
ಇನ್ನು ಆಶೀಶ್ ಸ್ನೇಹಿತನ ಹುಟ್ಟುಹಬ್ಬವಾಗಿರುತ್ತದೆ ಎಲ್ಲರೂ ಆತನಿಗೆ ಶುಭಾಶಯ ತಿಳಿಸುತ್ತಾರೆ.. ಆದರೆ ಯಶ್ ಮಾತ್ರ ಕೆಜಿಎಫ್ ಚಿತ್ರದ ಡೈಲಾಗ್ ಹೇಳುತ್ತಾರೆ.. “ಇಂದೇ ನನಗೆ ಕೋಲಾರದ ಗಣಿ ಸಿಕ್ಕಿದ್ದು, ನೀನೂ ಕೂಡ ಇಂದೇ ಹುಟ್ಟಿದ್ದಿಯಾ, ಒಂದು ಮಾತು ನೆನಪಿಟ್ಟುಕೊ ಇಲ್ಲಿ ಪ್ರೀತಿ ಹಾಗೂ ನಮ್ಮವರು ಎಂಬ ಭಾವನೆಗೆ ಜಾಗವಿಲ್ಲ” ಎಂದು ಯಶ್ ಹೇಳುತ್ತಾ, ಅಲ್ಲಿದ್ದವರನ್ನು ಗೊಂದಲಕ್ಕೀಡು ಮಾಡುತ್ತಾರೆ
ಹೀಗೆ ಈ ವಿಡಿಯೋ ಹಾಸ್ಯ ಹಾಗೂ ಯಶ್ ನ ಕೆಜಿಎಫ್ ನ ಡೈಲಾಗ್ ನೊಂದಿಗೆ ಸಾಗುತ್ತೆ.. ಈಗಾಗಲೇ ಯಶ್ ನಟಿಸರುವ ಕೆಜಿಎಫ್ ನ ಹಿಂದಿ ಅವತರಣಿಕೆ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಇದರಿಂದ ಎಚ್ಚೆತ್ತ ‘ಎಕ್ಸೆಲ್ ಮೂವೀಸ್’ ಬಾಲಿವುಡ್ ನಲ್ಲಿ ಈ ಬಗೆಯ ಪ್ರಮೋಶನ್ ಕೆಜಿಎಫ್ ಚಿತ್ರಕ್ಕೆ ನೀಡುತ್ತಿದ್ದಾರೆ..