ಸುದ್ದಿಗಳು

‘ಗರ್ಭದಿ’ ಮನಕಲುಕುವಂತಿದೆ ‘ಕೆಜಿಎಫ್’ ನ ಮತ್ತೊಂದು ಹಾಡು!!

ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ ......!!!

ಬೆಂಗಳೂರು,ಡಿ.10: ‘ಕೆಜಿಎಫ್’​ ಚಿತ್ರದಿಂದ  ಮತ್ತೊಂದು ಹಾಡು ಬಿಡುಗಡೆಯಾಗಿದೆ.. ಈಗಾಗಲೇ ಕೆಜಿಎಫ್ ತನ್ನ ಹವಾವವನ್ನು ಭಾರತೀಯ ಚಿತ್ರರಂಗದಲ್ಲಿ  ಧೂಳೆಬ್ಬಿಸಿದೆ.. ಕನ್ನಡ ಚಿತ್ರರಂಗದಲ್ಲಿ ಇದೊಂದು ಉತ್ತಮ ಮೈಲುಗಲ್ಲಾಗಿದೆ..

‘ಗರ್ಭದಿ’ ಎನ್ನುವ ಹಾಡು ಬಿಡುಗಡೆಯಾಗಿದ್ದು , ಅಮ್ಮನ ದೃಷ್ಟಿಕೋನದಲ್ಲಿ ಮೂಡಿಬಂದಿರುವ ಈ ಹಾಡು ಎಲ್ಲರ ಮನ ಕಲಕುವಂತಿದೆ…

“ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ

ತೇರಲಿ ಕುಳಿತಂತೆ ಅಮ್ಮ ಗುಮ್ಮ ಬಂತೆ ನಿಸಿ ಹೆದರಿ ನಿಂತಾಗ

ನಿನ್ನ ಸೆರಗೇ ಕಾವಲು ಅಮ್ಮ

ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ

ನಿನಗೆ ನನ್ನುಸಿರೆ ಆರತಿ

ತಂದಾನಿ ನಾನೇ ತಾನಿತಂದಾನೋ

ತಾನೇ ನಾನೇ ನೋ ತಂದಾನಿ ನಾನೇ

ತಾನಿತಂದಾನೋ ತಾನೇ ನಾನೇ ನೋ

ಈ ಸಾಲುಗಳು, ಅಮ್ಮನ ಕನಸು ಹಾಗೂ ಕನವರಿಕೆಯನ್ನು ಕಿನ್ನಲ್ ರಾಜ್ ಹಾಗೂ ರವಿ ಬಸ್ರೂರ್​ ಅತ್ಯುತ್ತಮವಾಗಿ ಪದಗಳಲ್ಲಿ ಸೆರೆಹಿಡಿದ್ದಾರೆ. ಈ  ಹಾಡಿಗೆ ಅನನ್ಯ ಭಟ್ ದನಿಯಾಗಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾದ ಮಾಸ್ ಸಾಂಗ್ ಸಲಾಂ ರಾಕಿ ಭಾಯ್, ಮಾಸ್ ಫೀಲ್ ಕೊಟ್ಟರೆ ಇನ್ನು ಈ ಹಾಡಿನಲ್ಲಿ ಅಮ್ಮ ಮಗನ ಸೆಂಟಿಮೆಂಟ್ ಟಚ್ ನೀಡಿದೆ..

ಕೆಜಿಎಫ್​ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಿಸೆಂಬರ್ 21ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.ಇನ್ನು ‘ಗರ್ಭದಿ’ ಹಾಡು ಯೂಟ್ಯೂಬ್ ನಲ್ಲಿ 3 ನೇ ಟ್ರೆಂಡಿಂಗ್ ಸ್ಥಾನವನ್ನು ಅಲಂಕರಿಸಿಕೊಂಡಿದೆ..

Tags

Related Articles