ಸುದ್ದಿಗಳು

ಬಾಲಿವುಡ್ ನಲ್ಲಿ ‘ಕೆಜಿಎಫ್’ !! ಶಾರುಖ್ ಅಭಿಮಾನಿಗಳು ಕೆಂಡಾಮಂಡಲ?!?

ನೀವು ‘ಝೀರೋ’ ಚಿತ್ರಕ್ಕೆ ಏಕೆ ಪ್ರಮೋಷನ್ ನೀಡಲ್ಲ?

ಬೆಂಗಳೂರು,ನ.8: ಈಗ ಎಲ್ಲೆಡೆಯೂ ‘ಕೆಜಿಎಫ್’  ಸಿನಿಮಾದ ಹವಾ.. ನಿನ್ನೆಯಷ್ಟೇ ವಿಭಿನ್ನ ರೀತಿಯ ಹೊಸ ಫೊಸ್ಟರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.,. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸಿನಿಮಾ ಡಿಸೆಂಬರ್​​ 21ಕ್ಕೆ ರಿಲೀಸ್​ ಆಗಲಿದೆ.  ಪ್ರಶಾಂತ್ ನೀಲ್ ನಿರ್ದೇಶನದ ನಾಲ್ಕು ಭಾಷೆಗಳಲ್ಲಿ ಈಗಾಗಲೇ ಪೋಸ್ಟರ್​​ ಬಿಡುಡೆಯಾಗಿದೆ.. . ರಿತೇಶ್​ ಸಿದ್ವಾನಿ ಹಾಗೂ ಫರ್ಹಾನ್​ ಅಖ್ತರ್​​ ಜಂಟಿಯಾಗಿ ‘ಕೆಜಿಎಫ್’​ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲಿದ್ದಾರೆ..

Related image

‘ಕೆಜಿಎಫ್’  ಸಿನಿಮಾ

ಇನ್ನು ಬಾಲಿವುಡ್ ನಲ್ಲಿ 1999ರಿಂದಲೇ ಚಿತ್ರ ನಿರ್ಮಿಸುತ್ತಿರೋ ಫರ್ಹಾನ್ ಅಖ್ತರ್, ಸ್ವತಃ ತಾವೇ ಖ್ಯಾತ ನಟ, ನಿರ್ದೇಶಕ, ಸಂಗೀತ ನಿರ್ದೇಶಕ,ಹಾಡುಗಾರ ಹಾಗೂ ಚಿತ್ರದ ಹಂಚಿಕೆದಾರರೂ ಹೌದು. ಹಾಗಾಗಿ ಬಾಲಿವುಡ್ ನಲ್ಲೂ ‘ಕೆಜಿಎಫ್’  ಸಿನಿಮಾವನ್ನು ಪ್ರಮೋಟ್ ಮಾಡಲಿದ್ದಾರೆ..

 ಕೆಜಿಎಫ್ ಹಿಂದಿ ಪೋಸ್ಟರ್

ಇನ್ನು ‘ಕೆಜಿಎಫ್’  ಸಿನಿಮಾ ಬಿಡುಗಡೆಯಾಗುವ ದಿನವೇ ಹಿಂದಿಯ ಶಾರುಖ್ ಅಭಿನಯದ ಜೀರೋ ಸಿನಿಮಾವೂ ಬಿಡುಗಡೆಯಾಗಲಿದ್ದು ಎರಡೂ ಸಿನಿಮಾ ಮಧ್ಯೆ ಪೈಪೋಟಿ ನಡೆಯಲಿದೆ..

ನಿನ್ನೆ ಮೊದಲ ಬಾರಿಗೆ ಕೆಜಿಎಫ್​ ನ ಹಿಂದಿ ಪೋಸ್ಟರ್ ರಿಲೀಸ್ ಆಗಿದ್ದು, ಅದನ್ನು ಫರ್ಹಾನ್ ಅಖ್ತರ್ ತಮ್ಮ ಟ್ವಿಟರ್​​ನಲ್ಲಿ “ಕೆಜಿಎಫ್’​ ಪರಿಚಯಿಸುತ್ತಿದ್ದೇವೆ ಅಧಿಕಾರ, ಚಿನ್ನ ಹಾಗೂ ಅದೃಷ್ಟ ಕೂಡ ವೀರರಿಗೇ ಸಹಾಯ ಮಾಡುವಂಥ ನೆಲ ಕೋಲಾರ ಗೋಲ್ಡ್ ಫೀಲ್ಡ್ಸ್” ಅಂತಾ ಟ್ವೀಟ್​​​ ಮಾಡಿದ್ದಾರೆ.

Image result for farhan akhtar

ಫರ್ಹಾನ್ ವಿರುದ್ದ ಟ್ವೀಟ್

ಇನ್ನು ಈ ಟ್ವೀಟ್ ಅನ್ನು ಕಂಡ ಶಾರುಖ್ ಅಭಿಮಾನಿಗಳು ನೀವೇಕೆ ಡಿ.21 ರಂದೇ ‘ಕೆಜಿಎಫ್’  ಚಿತ್ರ ಬಿಡುಗಡೆ ಮಾಡುತ್ತಿದ್ದೀರಿ? ನೀವು ಝೀರೋ ಚಿತ್ರಕ್ಕೆ ಏಕೆ ಪ್ರಮೋಷನ್ ನೀಡಲ್ಲ? ನಿಮ್ಮಂಥವರಿಗೆ ಬುದ್ದಿ ಕಲಿಸುತ್ತೇವೆ ಎಂದು ಕೆಲವರು ಫರ್ಹಾನ್ ಮೇಲೆ ಹರಿಹಾಯ್ದಿದ್ದಾರೆ.. ಇದಕ್ಕೆಲ್ಲಾ ಫರ್ಹಾನ್ ಕ್ಯಾರೆ ಎನ್ನದೆ ಸುಮ್ಮನಿದ್ದು ಆಗುತ್ತಿರುವ ತಮಾಷೆಯನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದಾರೆ

 

Tags