ಸುದ್ದಿಗಳು

ಬರೇ ಒಂದು ಬೊಗಸೆ ರಕ್ತ ನೋಡಿ ನೀನು ಇಷ್ಟು ಹೆದರ್ತೀಯಾ ಅಂದ್ರೆ, ಇನ್ನು ರಕ್ತ ನದಿಯಾಗಿ ಹರಿಯೋಕ್ಕೂ ಮುಂಚೆ ನೀನು ಹೊರಟ್ಬಿಡು..!!??!!

ಕೆಜಿಎಫ್’ ಟ್ರೇಲರ್ ಬಿಡುಗಡೆ...ಸಖತ್ ಆಗಿದೆ ಯಶ್ ಲುಕ್ ಹಾಗೂ ಡೈಲಾಗ್!! ‘

ವಿಧಿಯ ಕೈವಾಡ…ಆ ರಾತ್ರೆ ಎರಡು ಘಟನೆ ನಡೆಯಿತು.. ಆ ಜಾಗಾನೂ ಹುಟ್ತು..ಅವನೂ ಹುಟ್ದಾ..

ಬೆಂಗಳೂರು,ನ.9: ‘ಕೆಜಿಎಫ್’​ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟಿಸಿದೆ..  ನಗರದ ಓರಾಯನ್​ ಮಾಲ್​ನಲ್ಲಿ ಚಿತ್ರದ ಟ್ರೇಲರ್​ ರಿಲೀಸ್​ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನಾಲ್ಕು ಭಾಷೆಯಲ್ಲೂ ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದೆ. ಇನ್ನು ರೆಬಲ್ ಸ್ಟಾರ್ ಅಂಬರೀಶ್ ಚಿತ್ರದ ಪಂಚ ಭಾಷೆಗಳಲ್ಲಿರುವ ಟ್ರೇಲರ್​ ಅನ್ನ ರಿಲೀಸ್ ಮಾಡಿದರು.

ಕೆಜಿಎಫ್​ ಚಿತ್ರದ ತಮಿಳು ಭಾಷಾ ಹಕ್ಕನ್ನು ನಟ ಪುರಚ್ಚಿ ದಳಪತಿ ವಿಶಾಲ್​ ಪಡೆದುಕೊಂಡಿದ್ದಾರೆ. ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಅವರೂ ಕೂಡಾ ಭಾಗಿಯಾಗಿದ್ದಾರೆ.

ಡಿಸೆಂಬರ್ ೨೧ ಕ್ಕೆ ಸಾವಿರಕ್ಕೂ ಹೆಚ್ಷು ಚಿತ್ರಮಂದಿರಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಕೆಜಿಎಫ್ ರೀಲೀಸ್ ಆಗಲಿದೆ . 

ಚಿನ್ನದ ಗಣಿ ಪ್ರಮುಖ ಆಕರ್ಷಣೆ

ಕೆಜಿಎಫ್ ಸಿನಿಮಾದಲ್ಲಿ ಚಿನ್ನದ ಗಣಿ ಪ್ರಮುಖ ಆಕರ್ಷಣೆ. ಇದು ಟ್ರೈಲರ್ ನಲ್ಲೂ ಪ್ರೂವ್ ಆಗಿದೆ. ಇಡೀ ಸಿನಿಮಾ ಮೈನಿಂಗ್ ಸುತ್ತ ನಡೆಯಲಿದೆ ಎಂಬುದಕ್ಕೆ ಈ ಟ್ರೈಲರ್ ಒಂದು ಸುಳಿವು ನೀಡಿದೆ.

ಇದು 80ರ ದಶಕ ಸಿನಿಮಾ. 1951ರಿಂದಲೇ ಕಥೆ ಆರಂಭವಾಗಲಿದೆ. ಮುಂಬೈನಿಂದ ಈ ಕಥೆ ಆರಂಭವಾಗಗಲಿದ್ದು , ಟ್ರೈಲರ್ ಹೇಳುವಂತೆ ಇಲ್ಲಿ ರಾಜಕೀಯ, ಅಂಡರ್ ವರ್ಲ್ಡ್, ಪ್ರೀತಿ, ಜನ, ಹೀಗೆ ಹತ್ತು ಹಲವು ಅಂಶಗಳು ಒಮ್ಮೆ ಟ್ರೇಲರ್ ನಲ್ಲಿ ಬಂದು ಹೋಗುತ್ತದೆ

ಯಶ್ ಡೈಲಾಗ್ ಖಡಕ್ ಆಗಿದೆ

“ಆ ರಾತ್ರಿ ಎರಡು ಘಟನೆ ನಡೆಯಿತು ಆ ಜಾಗವೂ ಹುಟ್ಟಿತು, ಅವನೂ ಹುಟ್ಟಿದ ಎಂದು ಅಳುವ ಪುಟ್ಟ ಕಂದನಿಂದ ಶುರುವಾಗುತ್ತದೆ ಚಿತ್ರದ ಟ್ರೇಲರ್.. ಅವನಿಗೆ ಹೋಗುತ್ತಿದ್ದ ದಾರಿನೂ ಗೊತ್ತಿಲ್ಲ, ಅದರ ಚರಿತ್ರೆನೂ ಗೊತ್ತಿಲ್ಲ, ಇನ್ನು ಭಾವನೆಗಳಿಗೆ ಒಳಗಾಗಬೇಡ ಎನ್ನುವಾಗ ಯಶ್, ಎದೆಯಲ್ಲಿ ಕಲ್ಲು ಇದ್ದವನಿಗೆ ಇದು ಅಂಟುವುದೂ ಇಲ್ಲ” ಎಂದು ಖಡಕ್ ಡೈಲಾಗ್ ಹೇಳುತ್ತಾರೆ

ಯಶ್ ಲುಕ್

ಕೆಜಿಫ್​ ತಮಿಳು ವರ್ಶನ್ ಟ್ರೈಲರ್ bit.ly/VishalFilmFactory ಯೂ ಟ್ಯೂಬ್​ ಲಿಂಕ್​ ಅಲ್ಲಿ ಬಿಡುಗಡೆಯಾಗಲಿದೆ. ‘ಕೆಜಿಎಫ್’​ ಹೇಳುವಂತೆ ಕೋಲಾರ ಗೋಲ್ಡ್ ಫೀಲ್ಡ್ಸ್.. ಯಶ್ ನ ರಫ್ ಆಂಡ್ ಟಫ್ ಲುಕ್  ಆ ದಾಡಿ ,ಖಡಕ್ ಡೈಲಾಗ್ ಡೆಲಿವರಿ ಎಲ್ಲವೂ ಮಸ್ತ್ ಆಗಿದೆ.. ಇದು ಕೋಲಾರದಲ್ಲಿ ನಡೆಯುವ ಒಂದು ಫಟನೆಯ ಸುತ್ತ ಸುತ್ತುತ್ತದೆ ಎಂದು ಈ ಚಿತ್ರದ ಟ್ರೇಲರ್ ನೋಡಿದರೆ ಗೊತ್ತಾಗುತ್ತದೆ.. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು ಇನ್ನು ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ

“ಭಾವನೆಗಳಿಗೆ ಒಳಗಾಗಬೇಡ…ಇಲ್ಲಿ ಅವಕ್ಕೆ ಬೆಲೆ ಇಲ್ಲ…” ಅಂಥಾ  ಅವನಂದ್ರೆ…” ಎದೆಯಲ್ಲಿ ಕಲ್ಲು ಇದ್ದವಂಗೆ ಅವು (ಭಾವನೆಗಳು) ಅಂಟುವುದೂ ಇಲ್ಲ” 

“ಬರೇ ಒಂದು ಬೊಗಸೆ ರಕ್ತ ನೋಡಿ ನೀನು ಇಷ್ಟು ಹೆದರ್ತೀಯಾ ಅಂದ್ರೆ, ಇನ್ನು ರಕ್ತ ನದಿಯಾಗಿ ಹರಿಯೋಕ್ಕೂ ಮುಂಚೆ ನೀನು ಹೊರಟ್ಬಿಡು..”

ಈ ಮಾತುಗಳು ಟ್ರೈಲರ್ ನೋಡಿ ಹೊರಬಂದವರನ್ನು ಇನ್ನೂ ಕಾಡುತ್ತಿರುತ್ತವೆ. ಒಟ್ಟಾರೆ  ಇಲ್ಲಿನ ನುರಿತ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧೀಂದ್ರ ವೆಂಕಟೇಶ್ ರವರ ಪ್ರಚಾರದ ದಿಗ್ದರ್ಶನ ಮತ್ತದರ ಕ್ಷಮತೆಯನ್ನು ಒರೆಗೆ ಹಚ್ಚುವಂತೆ ಒರಾಯಿನ್ ಮಾಲ್ ನಲ್ಲಿ ನಡೆದ ಸುದೀರ್ಘ ಟ್ರೇಲರ್ ರಿಲೀಸ್ ಸಮಾರಂಭ ಅವರಿಗೂ, ಸಾಂಪ್ರದಾಯಿಕವಾದ ಅವರ ಸಂಸ್ಥೆಗೂ  ಮುಕುಟಪ್ರಾಯವಾದರೆ, ಅವರ ಕರೆಗೆ ಸ್ಪಂದಿಸಿದ ರಾಜಧಾನಿಯ ಸಿನಿಮಾಧ್ಯಮಕ್ಕೂ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ಬಾಲ್ಕನೀ ಕನ್ನಡ ನ್ಯೂಸ್ ಈ ಮಹಾನ್ ಸಿನೆಮಾ “ಕೆ.ಜಿ.ಎಫ್.” ನ ಇಂದಿನ ಸಮಾರಂಭದ  ಕುರಿತಾಗಿ ಕೇವಲ ಮೂರು ತಾಸಿನೊಳಗೇ  ಒಟ್ಟು ಒಂಭತ್ತು ಸುದ್ದಿ ಗಳನ್ನು ಪಖಾಯಿಸಿ  ಪ್ರಸಾರಮಾಡಿದೆ.

-ಡಾ| ಸುದರ್ಶನ ಭಾರತೀಯ, editor@balkaninews.com, 7022274686

Tags

Related Articles