ಸುದ್ದಿಗಳು

ಹಿಂದಿ ಭಾಷೆಯಲ್ಲಿ ‘ಕೆ.ಜಿ.ಎಫ್’ ಭರ್ಜರಿ ದಾಖಲೆ

‘ಬಾಹುಬಲಿ’ ಹಾಗೂ ‘2.0’ ಚಿತ್ರಗಳನ್ನು ಮೀರಿಸಿದ ಸಿನಿಮಾ

ಬೆಂಗಳೂರು.ಜ.11: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಐದು ಭಾಷೆಗಳಲ್ಲೂ ಕಮಾಲ್ ಮಾಡಿದೆ. ಸದ್ಯ 200 ಕೋಟಿ ಕಲೆಕ್ಷನ್ ಮಾಡಿದ ಮೊದಲ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾ ಇದೀಗ ಬಾಲಿವುಡ್ ನಲ್ಲೂ ಹೊಸ ದಾಖಲೆ ಬರೆದಿದೆ.

ಹಿಂದಿ ಆವೃತ್ತಿಯ ಗಳಿಕೆ

ಕೆಜಿಎಫ್ ಚಿತ್ರದ ಇದೀಗ ಹಿಂದಿ ಆವೃತಿ ಒಟ್ಟಾರೆ 40 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ಚಿತ್ರವೊಂದು ಬಾಲಿವುಡ್ ನಲ್ಲಿ ಈ ರೀತಿಯ ಕಲೆಕ್ಷನ್ ಮಾಡುತ್ತಿರುವುದು ಇದೇ ಮೊದಲು. ಇನ್ನು ‘ಬಾಹುಬಲಿ 2’, 2.0, ಬಾಹುಬಲಿ ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಕ್ಷಿಣ ಭಾರತದ ಚಿತ್ರದ ನಾಲ್ಕನೇ ಎಂಬ ಖ್ಯಾತಿಗೆ ಭಾಜನವಾಗಿದೆ.

ಇದೀಗ ಹಿಂದಿ ಭಾಷೆಯಲ್ಲಿ ‘ಕೆ.ಜಿ.ಎಫ್’ 40.39 ಕೋಟಿ ರುಪಾಯಿ ಗಳಿಕೆ ಮಾಡಿರುವ ಬಗ್ಗೆ ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದಲ್ಲಿಯೂ ಪ್ರದರ್ಶನ

ಎಲ್ಲಾ ಭಾಷೆಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಕೆ.ಜಿ.ಎಫ್’ ಇದೀಗ ಪಾಕಿಸ್ತಾನದಲ್ಲೂ ರಿಲೀಸ್ ಆಗಿ ದಾಖಲೆ ಮಾಡಿದೆ. IMGC ಬ್ಯಾನರ್ ಅಡಿಯಲ್ಲಿ ‘ಕೆಜಿಎಫ್’ ಹಿಂದಿ ಡಬ್ಬಿಂಗ್ ಬಿಡುಗಡೆಯಾಗುತ್ತಿದ್ದು ಸಿನಿಪ್ರೇಮಿಗಳು ಮುಂಗಡ ಟಿಕೆಟ್ ಬುಕಿಂಗ್ ಕೂಡಾ ಆರಂಭಿಸಿದ್ದಾರೆ. IMGC ಬ್ಯಾನರ್ ನಲ್ಲಿ ‘ಥಗ್ಸ್ ಆಫ್ ಹಿಂದುಸ್ಥಾನ್’ ಹಾಗೂ 2.O ಚಿತ್ರ ಬಿಡುಗಡೆಯಾಗಿತ್ತು. ಉತ್ತಮ ಪ್ರದರ್ಶನ ಕಂಡಿತ್ತು

#kgf, #balakninews #filmnews, #kannadasuddigalu, #yash,

Tags