ಸುದ್ದಿಗಳು

‘ಕೆಜಿಎಫ್’ ಚಾಪ್ಟರ್ – 2ನಲ್ಲಿ ಸಂಜಯ್ ದತ್..?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ

ಬೆಂಗಳೂರು, ನ.10: ‘ಕೆಜಿಎಫ್’ ಚಿತ್ರದ ಮೊದಲ ಚಾಪ್ಟರ್‌ ನ ಟ್ರೇಲರ್ ನಿನ್ನೆಯಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಎಲ್ಲಾ ಕಡೆಯಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.. ಇನ್ನು ಇದರ ಬೆನ್ನಲ್ಲೇ ಚಾಪ್ಟರ್‌ ನಲ್ಲಿ ಬಾಲಿವುಡ್‌ ನ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರಂತೆ.

ನಿನ್ನೆಯಷ್ಟೆ ಅದ್ಧೂರಿಯಾಗಿ ಬಿಡುಗಡೆಯಾದ ‘ಕೆಜಿಎಫ್’ ಟ್ರೇಲರ್

ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಸಿನಿಮಾ ‘ಕೆಜಿಎಫ್’ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ಸುದ್ದಿಯನ್ನ ಮಾಡ್ತಾನೇ ಬಂದಿದೆ. ಚಿತ್ರದ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋದಿಂದ ಸಖತ್ ಸೌಂಡ್ ಮಾಡ್ತಿದ್ದು, ನಿನ್ನೇಯಷ್ಟೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಸಿನಿ ಪ್ರೇಮಿಗಳು ಖುಷಿಯಾಗಿದ್ದಾರೆ..

ಚಾಪ್ಟರ್ ೨ ಸಿನಿಮಾ ತಯಾರಿ..?

ಇದೇ ಡಿಸೆಂಬರ್ 21ಕ್ಕೆ ತೆರೆಕಾಣುತ್ತಿರೋ ‘ಕೆಜಿಎಫ್’ ಸಿನಿಮಾದ ಹಾಡುಗಳು ಇದೇ ನವೆಂಬರ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ.. ಎಲ್ಲರಿಗೂ ಗೊತ್ತಿರುವಂತೆ ‘ಕೆಜಿಎಫ್’ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲಿಗೆ ಚಾಪ್ಟರ್ ಒಂದು ಬಿಡುಗಡೆಯಾಗುತ್ತಿದೆ.. ನಂತರ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಉಳಿದ ಭಾಗದ ಶೂಟಿಂಗ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಾ ಇದೆ.ಚಾಪ್ಟರ್ 2 ನಲ್ಲಿ ಸಂಜಯ್ ದತ್..?

ಇನ್ನು ಚಾಪ್ಟರ್ 2 ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಅನ್ನುವ ಮಾಹಿತಿ ಸದ್ಯ ಗಾಂಧಿನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.. ಈ ಟಾಕ್‌ನಿಂದ ‘ಕೆಜಿಎಫ್’ ತಾರಾಗಣದ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಲಿದೆ.. ಹೌದು, ಈಗಾಗಲೇ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡ ಸಂಜಯ್ ದತ್ ಅವರನ್ನು ಭೇಟಿಯಾಗಿ ಚಿತ್ರದ ಬಗ್ಗೆ ಹೇಳುವ ಜೊತೆಗೆ ಕೆಲವು ದೃಶ್ಯಗಳನ್ನು ಕೂಡಾ ತೋರಿಸಿದೆಯಂತೆ..

ಸಿನಿಮಾ ಮಾಡಲು ಸಂಜಯ್ ದತ್ ಒಪ್ಪುತ್ತಾರಾ..?

ಚಿತ್ರದ ತುಣುಕುಗಳನ್ನು ತೊರಿಸುವುದರ  ಜೊತೆಗೆ ಚಾಪ್ಟರ್ -2 ನಲ್ಲಿ ಬರುವ ಪ್ರಮುಖ ಪಾತ್ರವೊಂದನ್ನು ಮಾಡುವಂತೆ ಕೇಳಿಕೊಂಡಿದೆ ಚಿತ್ರತಂಡ.. ಕೆಜಿಎಫ್‌ನ ತುಣುಕುಗಳನ್ನು ನೋಡಿ ಸಂಜಯ್ ದತ್ ಕೂಡಾ ಖುಷಿಯಾಗಿದ್ದಾರೆ.. ಎಲ್ಲಾ ಅಂದುಕೊಂಡಂತೆ ಸಂಜಯ್ ದತ್ ನಟಿಸಲು ಒಪ್ಪಿದರೆ ‘ಕೆಜಿಎಫ್ ಚಾಪ್ಟರ್-೧’ ನ ಕೊನೆಯಲ್ಲಿ ಅವರ ಮುಖ ತೋರಿಸಿ, ಮುಂದಿನ ಭಾಗದಲ್ಲಿ ಅವರಿರುವ ಸುಳಿವು ನೀಡುವ ಯೋಚನೆ ಕೂಡಾ ಚಿತ್ರತಂಡದ ಪ್ಲಾನ್ ಆಗಿದೆಯಂತೆ..ಸಂಜಯ್ ದತ್‌ಗೆ ಇದೆಯಾ ಈ ಸಿನಿಮಾದಲ್ಲಿ ಆಸಕ್ತಿ

ಚಾಪ್ಟರ್ 2ನಲ್ಲಿ ಪ್ರಮುಖ ಪಾತ್ರವೊಂದಿದ್ದು, ಆ ಪಾತ್ರವನ್ನು ಸಂಜಯ್ ದತ್ ಮಾಡಿದರೆ ಆ ಪಾತ್ರಕ್ಕೆ ವೇಟೇಜ್ ಇರಲಿದೆ ಅನ್ನುವುದು ‘ಕೆಜಿಎಫ್’ ಚಿತ್ರತಂಡದ ಅಭಿಪ್ರಾಯವಾಗಿದೆ.. ಈ ಕಾರಣಕ್ಕೆ ಚಿತ್ರತಂಡ ಅವರನ್ನು ಕೇಳಿಕೊಂಡಿದ್ದಾರೆ.. ಇನ್ನು ಈಗಾಗಲೇ ‘ಕೆಜಿಎಫ್’ ಚಿತ್ರಕ್ಕೆ ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಸಂಜಯ್ ದತ್ ಕೂಡಾ ಚಿತ್ರದ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಐದು  ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ

‘ಕೆಜಿಎಫ್’ ಸಿನಿಮಾದ ಟ್ರೇಲರ್ ಸದ್ಯ ಐದು ಭಾಷೆಯಲ್ಲಿ ಬಿಡುಗಡೆಗೊಂಡು, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ.. ಅಷ್ಟೇ ಅಲ್ಲದೇ ಕನ್ನಡ ಅವತರಣಿಕೆಗಿಂತ ಬೇರೆ ಭಾಷೆಯಲ್ಲಿ ಬಿಡುಗಡೆಯಾದ ‘ಕೆಜಿಎಫ್’ ಟ್ರೇಲರ್‌ ಗೆ ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ದೊರೆತಿದ್ದು, ಇದೇ ಡಿಸೆಂಬರ್ 21ಕ್ಕೆ ಚಿತ್ರ  ರಾಜ್ಯಾದ್ಯಂತ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

Tags

Related Articles