ಸುದ್ದಿಗಳು

ಸದ್ದಿಲ್ಲದೆ ಮುಹೂರ್ತ ಆಚರಿಸಿಕೊಂಡ ಕೆಜಿಎಫ್ ಚಾಪ್ಟರ್-2

ಬೆಂಗಳೂರು, ಮಾ.13: ಕೆಜಿಎಫ್ ಚಾಪ್ಟರ್ 1 ನಿಜಕ್ಕೂ ಕಮಾಲ್ ಮಾಡಿದೆ  . ಈ ಸಿನಿಮಾ ಕನ್ನಡ ಸಿನಿಮಾ ರಂಗವನ್ನೇ ಎತ್ತರಕ್ಕೆ ತೆಗೆದುಕೊಂಡು ಹೋಗುವಂತೆ ಮಾಡಿದೆ. ಇದೀಗ ಕೆಜಿಎಫ್ ಸಿನಿಮಾದ 2ನೇ ಚಾಪ್ಟರ್ ಕೂಡ ಚಿತ್ರೀಕರಣಕ್ಕೆ ಸಜ್ಜಾಗಿದೆ.

ವಿಜಯನಗರದ ಕೋದಂಡರಾಮ

ಇಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಸರಳವಾಗಿ ವಿಜಯನಗರದ ಕೋದಂಡರಾಮ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ದೇವರ ದರ್ಶನ ಪಡೆದು, ಪೂಜೆ ಮಾಡಿ ಸಿನಿಮಾದ ಕೆಲಸವನ್ನು ಚಿತ್ರತಂಡ ಶುರು ಮಾಡುತ್ತಿದೆ. ಈ ಪೂಜಾ ಮುಹೂರ್ತದಲ್ಲಿ ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ  ಭಾಗಿಯಾಗಿದ್ದರು.

ಕೆಜಿಎಫ್ಚಾಪ್ಟರ್ 1

ಕೆಜಿಎಫ್’ ಚಾಪ್ಟರ್ 1 ಚಿತ್ರ ಈ ರೀತಿ ದೊಡ್ಡ ಗೆಲುವು ಕಂಡಿದ್ದರಿಂದ ಚಾಪ್ಟರ್ 2 ಮೇಲೆ ಪ್ರೇಕ್ಷಕರ ನಿರೀಕ್ಷೆಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ ಹಾಗಾಗಿ ಚಾಪ್ಟರ್ 2 ಚಿತ್ರವನ್ನು ಮಾಡುವ ಸಕಲ ತಯಾರಿಯು ನಡೆಯುತ್ತಿದೆ. ಆದ್ರೆ ಅದರ ಗೆಲುವು ಇಡಿ ವಿಶ್ವವೇ ಮೆಚ್ಚಿಕೊಳ್ಳುವಂತೆ ಮಾಡಬೇಕೆಂಬುದು ಚಿತ್ರ ತಂಡದ ಉದ್ದೇಶ ಈ ಬೆನ್ನಲ್ಲೇ ಇದೀಗ ಈ ಸಿನಿಮಾಗಾಗಿ ತಯಾರಿಗಳು ಕೂಡ ನಡೆಯುತ್ತಿವೆ.

‘ಯುವರತ್ನ’ ಚಿತ್ರತಂಡ ಸೇರಿದ ತಮಿಳು ಸ್ಟಂಟ್ ಮಾಸ್ಟರ್ಸ್

Tags

Related Articles