ಸುದ್ದಿಗಳು

‘ಕೆಜಿಎಫ್’ ಗಾಗಿ ಬೆಂಗಳೂರಿನಲ್ಲಿ ನಿರ್ಮಾಣವಾಯ್ತು ನರಾಚಿ

ರಾಕಿಂಗ್ ಸ್ಟಾರ್ ಯಶ್  ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗಿದೆ…ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕೆಜಿಎಫ್ 2’ ಸಿನಿಮಾದ ಚಿತ್ರೀಕರಣಕ್ಕಾಗಿ  ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ…ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಬೃಹತ್ ಸೆಟ್ ನಿರ್ಮಾಣವಾಗಿದೆ….

ಕೆಜಿಎಫ್ ಚಾಪ್ಟರ್ 2 ಕಥೆಯ ಕೆಲವು ಭಾಗ ನರಾಚಿಯಲ್ಲಿ ನಡೆಯಲಿದೆ..ಆದ್ದರಿಂದ ಬೆಂಗಳೂರಿಲ್ಲಿಯೇ ನರಾಚಿಯ ಸೆಟ್ ಹಾಕಿಸಿದ್ದಾರೆ ಕಲಾ ನಿರ್ದೇಶಕರು…ಕೆಜಿಎಫ್ ಚಾಪ್ಟರ್ 1  ಗೆ ಕಲಾ ನಿರ್ದೇಶನ ಮಾಡಿದ ಶಿವಕುಮಾರ್ ಅವರೇ ಈ ಸಲವೂ ಚಿತ್ರಕ್ಕೆ ಆರ್ಟ್ ಡೈರೆಕ್ಷನ್ ಮಾಡುತ್ತಿದ್ದಾರೆ …

ಸೆಟ್ ನಲ್ಲಿ ಈಗಾಗಲೇ ಕಾರ್ಮಿಕರ ಕುರಿತಾದ ದೃಶ್ಯಗಳನ್ನು ಚಿತ್ರೀಕರಣ ನಡೆಸಲಾಗಿದ್ದು, ಸಾವಿರಾರು ಸಹ ನಟರು ಚಿತ್ರದಲ್ಲಿ ಭಾಗಿಯಾಗಿದ್ದಾರೆ ….ಕೆಜಿಎಫ್  ಚಾಪ್ಟರ್ 2 ಸೆಟ್ನ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ…ರಾಕಿ ಬಾಯ್ ಈಗಾಗಲೇ ಒಂದು ವಾರದ ಚಿತ್ರೀಕರಣವನ್ನ ಮುಗಿಸಿ ಸದ್ಯ ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾರೆ…ಬೆಂಗಳೂರಿನ ಜೊತೆಗೆ ಕೆಜಿಎಫ್ ನಲ್ಲಿ ಸೆಟ್ ನಿರ್ಮಾಣದ ಕೆಲಸ ನಡೆಯುತ್ತಿವೆ.

‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಆತ್ಮದ ಕಥೆ

#balkaninews #sandalwood #kannadamovies #kgf #kgfchapter2 #yash #prashantneel #kgfshootingset

Tags