ಸುದ್ದಿಗಳು

ಬಾಕ್ಸ್ ಆಫೀಸಿನಲ್ಲಿ 100 ಕೋಟಿ ಬಾಚಿ, ಮುನ್ನುಗ್ಗುತ್ತಿರುವ ‘ಕೆಜಿಎಫ್’…!!??!!

ನೂರು ಕೋಟಿ ದಾಟಿದ ಕೆಜಿಎಫ್…!!?!!

ಬೆಂಗಳೂರು, ಡಿ.26: ಬಹುತೇಕ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳು ಬ್ಲಾಕ್ ಬಸ್ಟರ್ ಆಗುತ್ತವೆ ಅಂತಾ ಹೇಳುತ್ತಿದ್ದ ಸಿನಿಮಾ ಪಂಡಿತರ ಲೆಕ್ಕಾಚಾರಗಳು ಎಲ್ಲೋ ಒಂದು ಕಡೆ ನಿಜವೇನೋ ಅನ್ನಿಸ್ತಿದೆ. ಅದಕ್ಕೆ ಸ್ಟ್ರಾಂಗ್ ಎಕ್ಸಾಂಪಲ್ ಇತ್ತೀಚೆಗೆ ಬಿಡುಗಡೆಯಾದ ‘ಕೆಜಿಎಫ್’ ಚಿತ್ರ, ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ.

ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ‘ಕೆಜಿಎಫ್’

‘ಕೆಜಿಎಫ್’..ಡಿಸೆಂಬರ್ 21 ಶುರುವಾಗಿರುವ ‘ಕೆಜಿಎಫ್’ ಜಾತ್ರೆ ಮಾಡುತ್ತಿರುವ ಮೋಡಿ ಅಂತಿಂತದ್ದಲ್ಲ. ಚಿತ್ರ ಬಿಡುಗಡೆಯಾಗಿ ಎಲ್ಲ ಸಿನಿ ಪ್ರೇಮಿಗಳ ಮನಸು ಕದಿಯುವಲ್ಲಿ ಯಶಸ್ವಿಯಾಗಿರುವುದು ಒಂದು ಕಡೆಯಾದ್ರೆ, ಬಿಡುಗಡೆಯಾದ ಮೊದಲ ದಿನದಿಂದಲೇ ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಜೊತೆಗೆ ಈ ಹಿಂದೆ ದಾಖಲೆ ಮಾಡಿದಂತಹ ಚಿತ್ರಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿದೆ ನಮ್ಮ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್.

ರಾಕಿ ಭಾಯ್‌ಗೆ ಸಲಾಂ ಅಂತು ಚಿತ್ರರಂಗ

ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಬೋರ್ಡ್ ರನ್ನಿಂಗ್ ನಲ್ಲಿದೆ, ಅದೆಷ್ಟೋ ಚಿತ್ರಮಂದಿರಗಳಲ್ಲಿ ಮುಂಚೆಯೇ ಶೋ ಫುಲ್ ಬುಕ್ ಆಗಿವೆ, ಅದೆಷ್ಟೋ ಚಿತ್ರಮಂದಿರಗಳಲ್ಲಿ ದಿನಕ್ಕೆ ನಾಲ್ಕು ಶೋ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳು ಪ್ರದರ್ಶನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಇವೆಲ್ಲವನ್ನು ನೋಡುತ್ತಿದ್ರೆ ನಮ್ಮ ಕನ್ನಡದ ಚಿತ್ರವೊಂದು ಈ ಮಟ್ಟಕ್ಕೆ ಸೌಂಡ್ ಮಾಡುತ್ತಿರೊದನ್ನು ಕಂಡು ಹೆಮ್ಮೆಯನ್ನಿಸುತ್ತಿದೆ.

Image result for kgf

ಪ್ರಶಾಂತ್ ನೀಲ್ ನಿರ್ದೇಶನದ ಎರಡನೇ ಚಿತ್ರ

ಇನ್ನೂ ಇಷ್ಟೆಲ್ಲ ಸದ್ದು ಮಾಡುತ್ತಿರುವ ಕೆಜಿಎಫ್ ಚಿತ್ರ ಯಾವ ಯಾವ ದಾಖಲೆಗಳನ್ನ ಮಾಡಿದೆ ಅಂತಾ ಹುಡುಕುತ್ತಾ ಹೋದ್ರೆ ನಿಮಗೆ ನಂಬಲಸಾದ್ಯವಾದ ವಿಷಯಗಳು ಸಿಗುತ್ತಾ ಹೋಗುತ್ತವೆ, ಆದ್ರೂ ಅವೆಲ್ಲ ಸತ್ಯವೇ. ಈ ಹಿಂದೆ ಪ್ರಪಂಚದಾದ್ಯಂತ ಬಿಡುಗಡೆಯಾಗಿ ದೊಡ್ಡ ಮಟ್ಟದ ಸೂಪರ್ ಹಿಟ್ ಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡ ಚಿತ್ರ ‘ಬಾಹುಬಲಿ’, ಆದ್ರೆ ಈ ಬಾಹುಬಲಿಯ ದಾಖಲೆಗಳನ್ನೆ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾನೆ ಕನ್ನಡದ ರಾಕಿ ಭಾಯ್.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ರಾಕಿ ಭಾಯ್

ಇಷ್ಟೆಲ್ಲ ದಾಖಲೆಗಳನ್ನು ಮಾಡಿದ ‘ಕೆಜಿಎಫ್’ ಚಿತ್ರ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟಿರಬಹುದು ಅಂತಾ ಹುಡುಕುತ್ತಾ ಹೋದ್ರೆ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 30 ಕೋಟಿ ಎಂದು ಮೂಲಗಳ ಪ್ರಕಾರ ತಿಳಿದು ಬಂದಿರುವಂತಾದ್ದು, ಇನ್ನೂ ಕನ್ನಡದಲ್ಲಿ ನೂರು ಕೋಟಿ ಕ್ಲಬ್ ಸೇರುವಂತ ಚಿತ್ರಗಳು ಬರಬೇಕು ಎನ್ನುತ್ತಿದ್ದ ಸಿನಿ ಪ್ರೇಮಿಗಳಿಗೆ, ಗಾಂಧಿನಗರದ ಮಂದಿಗೆ, ಈ ದಾಖಲೆಗಳನ್ನು ನೋಡುತ್ತಿದ್ರೆ ಕೆಜಿಎಫ್ ಚಿತ್ರ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದರು. ಮೊದಲ ದಿನವೇ ಮುವತ್ತೂ ಕೋಟಿ ಬಾಚಿರೋ ಕೆಜಿಎಫ್ ಇನ್ನೂ ಮುರ್ನಾಲ್ಕು ದಿನದಲ್ಲಿ ಆ ದಾಖಲೆಯನ್ನೂ ಮಾಡುತ್ತೆ ಎಂದು ಹೇಳಲಾಗುತ್ತಿದೆ. ಆ ಮಾತು ಇಂದು ನಿಜವಾಗಿದೆ.

Image result for kgf

100 ಕೋಟಿ ಕ್ಲಬ್ ಸೇರಿದ ಸಿನಿಮಾ..?

ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಕಳೆದ ಆರು ದಿನಗಳ ಹಿಂದೆ ಬಿಡುಗಡೆಯಾಗಿದೆ. ಕೇವಲ ಆರೇ ದಿನಕ್ಕೆ ಈ ಸಿನಿಮಾ ನೂರು ಕೋಟಿ ಹಣ ಬಾಚಿದೆ ಎಂಬುದು ಚಿತ್ರತಂಡಗಳ ಮೂಲಗಳ ಮಾಹಿತಿ. ಆದರೆ ಇನ್ನು ಯಾವುದನ್ನೂ ಚಿತ್ರತಂಡ ಅಧಿಕೃತ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಈ ಸಿನಿಮಾ ನೂರು ಕೋಟಿ ಬಾಚಿದೆ. ಈಗಾಗಲೇ ಈ ನೂರು ಕೋಟಿ ಹಣಗಳಿಕೆ ನಿರೀಕ್ಷೆ ಮಾಡಿದ್ದು, ಆದರೆ ಇಷ್ಟು ಬೇಗ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ.

ಒಟ್ಟಿನಲ್ಲಿ ಬಿಡುಗಡೆಯಾದ ಆರನೇ ದಿನಕ್ಕೆ ದಾಖಲೆಗಳನ್ನು ಒಂದೊಂದಾಗೇ ಬ್ರೇಕ್ ಮಾಡುತ್ತ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರ ಮುಂದಿನ ದಿನಗಳಲ್ಲಿ ಇನ್ನೂ ಯಾವೆಲ್ಲ ದಾಖಲೆ ಬರೆಯಲಿದೆಯೋ ಅಂತಾ ಕಾದುನೋಡಬೇಕು.

 

Tags

Related Articles