ಸುದ್ದಿಗಳು

ಯುಎಸ್ ನಲ್ಲಿ ‘ಕೆಜಿಎಫ್’ $800k ಗಳಿಸಿ ಹೊಸ ದಾಖಲೆ!!!

ಯುಎಸ್ ನಲ್ಲಿ $ 800,000 ಗಿಂತಲೂ ಹೆಚ್ಚು ಸಂಗ್ರಹಿಸಿದೆ

ಬೆಂಗಳೂರು,ಜ.13: ‘ಕೆಜಿಎಫ್’ ಬರೋಬ್ಬರಿ 25 ದಿನಗಳನ್ನು ಪೂರೈಸಿದೆ.. ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ.. ಹೊರದೇಶಗಳಲ್ಲೂ ಕೆಜಿಎಫ್ ಹವಾ ಬಲು ಜೋರಾಗಿಯೇ ಇದೆ.. ಚಲನಚಿತ್ರ 25 ದಿನಗಳನ್ನು ಬಾಕ್ಸ್ ಆಫೀಸ್ನಲ್ಲಿ ಪೂರೈಸಿದ ಕೆ.ಜಿ.ಎಫ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಡಿಯಲ್ಲಿ, ಈ ಚಿತ್ರವು ಯುಎಸ್ ನಲ್ಲಿ  $ 800,000 ಗಿಂತಲೂ ಹೆಚ್ಚು ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. ಕನ್ನಡ ಚಿತ್ರದಲ್ಲಿ  ಇದು ಒಂದು ದೊಡ್ಡ ಸಾಧನೆಯಾಗಿದೆ.

ಕೆಜಿಎಫ್ ನ ಹಿಂದಿ ಆವೃತ್ತಿ

ಕೆಜಿಎಫ್ ನ ಹಿಂದಿ ಆವೃತ್ತಿಯು ದೇಶದಾದ್ಯಂತ ನಿರಂತರವಾಗಿ  ಮುನ್ನುಗ್ಗುತ್ತಿದೆ.., ಬಾಹುಬಾಲಿ 2, 2.0 ಮತ್ತು ಬಾಹುಬಲಿ ನಂತರ ಹಿಂದಿ ಚಲನಚಿತ್ರದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿದೆ.

Image may contain: 1 person, text

ವಿಜಯ್ ಕಿರಗಂದೂರು ನಿರ್ಮಾಣ

ವಿಜಯ್ ಕಿರಗಂದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತಕುಮಾರ್, ಮಾಳವಿಕಾ ಅವಿನಾಶ್, ಅನಂತನಾಗ್, ವಸಿಷ್ಟ ಸಿಂಹ ಮೊದಲಾದವರು ಅಭಿನಯಿಸಿದ್ದು, ಮೇಕಿಂಗ್ ನಿಂದಲೂ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಕೆಜಿಎಫ್, ಈಗ ಬಿಡುಗಡೆ ಬಳಿಕ ಭರ್ಜರಿ ಯಶಸ್ಸಿನತ್ತ ಸಾಗುವುದರೊಂದಿಗೆ 200ಕೋಟಿ ಗಡಿ ದಾಟಿ ಹೊಸ ದಾಖಲೆ ಬರೆಯುವತ್ತ ಮುನ್ನಡೆದಿದೆ.

Tags

Related Articles