ಸುದ್ದಿಗಳು

ಹಿಂದಿ ಡಬ್ಬಿಂಗ್ ಗಳಿಕೆಯಲ್ಲಿ ‘ಕೆಜಿಎಫ್’ ಗೆ ನಾಲ್ಕನೇ ಸ್ಥಾನ

ಬೆಂಗಳೂರು, ಜ.12: ಬಹುತೇಕ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳು ಬ್ಲಾಕ್ ಬಸ್ಟರ್ ಆಗುತ್ತವೆ ಅಂತಾ ಹೇಳುತ್ತಿದ್ದ ಸಿನಿಮಾ ಪಂಡಿತರ ಲೆಕ್ಕಾಚಾರಗಳು ಎಲ್ಲೋ ಒಂದು ಕಡೆ ನಿಜವೇನೋ ಅನಿಸುತ್ತಿದೆ. ಅದಕ್ಕೆ ತಾಜಾ ಉದಾಹರಣೆ ‘ಕೆಜಿಎಫ್’ ಸಿನಿಮಾ. ನಿರೀಕ್ಷೆಗೂ ಮೀರಿದ ನಾಗಾಲೋಟ ಕಾಣುತ್ತಿದೆ ಈ ಸಿನಿಮಾ. ಗಳಿಕೆಯಲ್ಲೂ ಮುಂದಿರುವ ‘ಕೆಜಿಎಫ್’ ಹಿಂದಿಯಲ್ಲೂ ಕಮಾಲ್ ಮಾಡಿದೆ.

ಹಿಂದಿಯಲ್ಲಿ ಕಮಾಲ್

‘ಕೆಜಿಎಫ್’ ಬಗ್ಗೆ ಅಭಿಮಾನಿಗಳು ಆಡದ ಮಾತಿಲ್ಲ. ಯಾಕೆಂದರೆ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಥಿಯೇಟರ್ ಒಳಗೆ ಹೋಗಿ‌ ಸಿನಿಮಾ ಮುಗಿಯುವಷ್ಟರಲ್ಲಿ ಸಿನಿಮಾ ಅಭಿಮಾನಿಯಾಗಿ ಹೊರ ಬರುತ್ತಾರೆ. ಆ ಮಟ್ಟಿಗೆ ಪ್ರೇಕ್ಷಕರ ಮನ ಸೆಳೆಯುತ್ತಿದೆ ‘ಕೆಜಿಎಫ್’ ಸಿನಿಮಾ. ಇಂದೆಂದೂ ಕಾಣದಂತಹ ದಾಖಲೆ ಮಟ್ಟಿಗೆ ಓಡುತ್ತಿದೆ ಕೆಜಿಎಫ್. ಬಹಳಷ್ಟು ಅಭಿಮಾನಿಗಳು ಈ ಸಿನಿಮಾವನ್ನು ಅದೆಷ್ಟು ಬಾರೀ ವೀಕ್ಷಣೆ ಮಾಡಿದ್ದಾರೋ ಗೊತ್ತಿಲ್ಲ. ಇದೀಗ ಈ ಸಿನಿಮಾ ಯಶಸ್ವಿ 25 ದಿನಗಳತ್ತ ಹೋಗುತ್ತಿದೆ. ಇದರ ಜೊತೆಗೆ ಹಿಂದಿಯಲ್ಲಿ ಕಮಾಲ್ ಮಾಡಿದೆ.ಅತಿ ಹೆಚ್ಚು ಗಳಿಕೆ

ಹೌದು, ಹಿಂದಿಗೆ ಡಬ್ ಆಗಿರುವ ‘ಕೆಜಿಎಫ್’ ಚಿತ್ತ ಈವರೆಗೆ 40.39 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆದ ಸಿನಿಮಾಗಳ ಪೈಕಿ ಅತಿ ಹೆಚ್ಚು ಹಣಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಪಾತ್ರವಾಗಿದೆ. ಬಾಹುಬಲಿ 2, 2.0, ಹಾಗೂ ಬಾಹುಬಲಿ ಭಾಗ 1 ಸಿನಿಮಾದ ನಂತರದ ಸ್ಥಾನದಲ್ಲಿ ಕೆಜಿಎಫ್ ಗುರುತಿಸಿಕೊಂಡಿದೆ.

ಈ ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 21.45 ಕೋಟಿ ರೂ., ಎರಡನೇ ವಾರಕ್ಕೆ 11.50 ಕೋಟಿ ಹಾಗೂ ಮೂರನೇ ವಾರ 7.44 ಕೋಟಿ ರೂ, ಗಳಿಸುವ ಮೂಲಕ ಒಟ್ಟು 40.39 ಕೋಟಿ ರೂಪಾಯಿ ಬಾಚಿದೆ.

#sandalwood #kannadamovies #yash #yashmovies #kgf #monsterhit #taranadarsh #balkaninews

Tags