ಸುದ್ದಿಗಳು

ಜಪಾನ್ ನಲ್ಲಿ ರಾಖಿ ಬಾಯ್ ಹವಾ

ಬೆಂಗಳೂರು, ಜ.29:

‘ಕೆಜಿಎಫ್’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಹಾಗೂ ಬಿಡುಗಡೆಯಾದಾಗಿನಿಂದಲೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ದೇಶ ಹೊರ ದೇಶಗಳಲ್ಲೂ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಅಷ್ಟೆ ಅಲ್ಲ ಎಲ್ಲಾ ಕಡೆಗಳಲ್ಲೂ ಒಳ್ಳೆಯ ಪ್ರಶಂಸೆ ಗಳಿಸಿದೆ. 50 ದಿನದತ್ತ ದಾಪುಗಾಲಾಕುತ್ತಿರುವ ಬೆನ್ನಲ್ಲೇ ಈ ಸಿನಿಮಾ ಇನ್ನೊಂದು ಸುದ್ದಿ ಮಾಡಿದೆ.

ಯಶ್ ಡೈಲಾಗ್‌ ಗೆ ಬೇಡಿಕೆ

ನಟ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಕನ್ನಡಿಗರಿಗೆ ಹಮ್ಮೆ ಮೂಡಿಸಿದೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಒಳ್ಳೆಯ ಯಶಸ್ಸು ಗಳಿಸುತ್ತಿರುವ ಈ ಸಿನಿಮಾ ಈಗಾಗಲೇ ಗಳಿಕೆಯಲ್ಲೂ ಕೂಡ ಮುಂದಿದೆ. ಅಷ್ಟೆ ಅಲ್ಲ ಪರ ದೇಶಗಳಲ್ಲಂತೂ ಬಹಳಷ್ಟು ಮನ್ನಣೆ ಈ ಸಿನಿಮಾಗೆ ಸಿಕ್ಕಿದೆ ಅಂದ್ರೆ ತಪ್ಪಾಗಲಾರದು. ಈಗಾಗಲೇ ಜಪಾನ್‌ ನಲ್ಲೂ ಯಶಸ್ವಿ ಪ್ರರ್ದಶನ ಕಾಣುತ್ತಿರುವ ಈ ಸಿನಿಮಾಗೆ ಯಶ್ ಸಾಥ್ ನೀಡಿದ್ದಾರೆ.

ವಿಡಿಯೋದಲ್ಲಿ ಯಶ್ ಡೈಲಾಗ್

ಹೌದು, ಸಿನಿಮಾ ನೋಡುವ ವೇಳೆ ಅಲ್ಲಿದ್ದ ಒಬ್ಬ ಕನ್ನಡಿಗ ಯಶ್‌ ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಯಶ್ ಮಾತನಾಡಿದ್ದಾರೆ. ಇನ್ನು ಅಲ್ಲಿ ನೆರೆದಿದ್ದ ಪ್ರೇಕ್ಷಕರು ಒಂದು ಡೈಲಾಗ್ ಬೇಕು ಅಂತಾ ಕೇಳಿಕೊಂಡಾಗ ಯಶ್ ಅವರ ಅಪೇಕ್ಷೆಯಂತೆ ಡೈಲಾಗ್ ಕೂಡ ಹೊಡೆದಿದ್ದಾರೆ. ಇದೀಗ ಈ ಎಲ್ಲಾ ವಿಡಿಯೋಗಳು ಸಕ್ಕತ್ ವೈರಲ್ ಆಗಿದ್ದು, ಅಭಿಮಾನಿಗಳಂತೂ ಈ ವಿಡಿಯೋ ನೋಡಿ ಖುಷಿಯಾಗಿದ್ದಾರೆ.

ಕಲಾವಿದನ ಕುಂಚದಿಂದ ಅರಳಿತು ‘ಕೆಜಿಎಫ್’ ಕಾರ್ಟೂನ್!!

#sandalwood #yash #yashmovies #yashhits #yashkgf #kgfinjapan #balkaninews

Tags

Related Articles