ಸುದ್ದಿಗಳು

ಪಾಕಿಸ್ತಾನದಲ್ಲೂ ಕಮಾಲ್ ಮಾಡುತ್ತಿರುವ ‘ಕೆಜಿಎಫ್’

ಬೆಂಗಳೂರು, ಜ.11: ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಿನಿಮಾ ಇದೀಗ ಬಿಡುಗಡೆಯಾದಾಗಿನಿಂದಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಇಂದಿಗೂ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ ಈ ಸಿನಿಮಾ. ಅಷ್ಟೆ ಅಲ್ಲ ಗಳಿಕೆಯಲ್ಲೂ ಕೂಡ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಇದೀಗ ಈ ಸಿನಿಮಾ ಪಾಕಿಸ್ತಾನದಲ್ಲಿ ತನ್ನ ಝಂಡಾ ಹಾರಿಸಿದೆ.

ಪರದೇಶದಲ್ಲೂ ಕನ್ನಡ ಸಿನಿಮಾ ಝಂಡಾ

ಹೌದು, ಕನ್ನಡದ ಸಿನಿಮಾವೊಂದು ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅಷ್ಟೆ ಅಲ್ಲ ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ಫುಲ್ ಆಗುತ್ತಿದೆಯಂತೆ. ಕೆಜಿಎಫ್ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತಿರುವುದು ದಾಖಲೆ. ಅದರಲ್ಲೂ ಹೌಸ್ ಫುಲ್ ಟಿಕೆಟ್ ಬುಕ್ಕಿಂಗ್ ಆಗುತ್ತಿರುವುದು ಇನ್ನೊಂದು ದಾಖಲೆ ಹಾಗಾಗಿ ಕೆಜಿಎಫ್ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಅದೆಷ್ಟೋ ಹಿಂದಿ‌ ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಕನ್ನಡ ಸಿನಿಮಾ ಇದೀಗ ಬಿಡುಗಡೆಯಾಗುತ್ತಿರುವುದು ವಿಶೇಷ.

ದಾಖಲೆ ಮೇಲೆ ದಾಖಲೆ

ಇಷ್ಟೆಲ್ಲ ದಾಖಲೆಗಳನ್ನು ಮಾಡಿದ ಕೆಜಿಎಫ್ ಚಿತ್ರವನ್ನು ಇದೀಗ ಪರ ದೇಶದವರು ಹಾಡಿ ಹೊಗಳುವಂತಾಗಿದೆ. ಕನ್ನಡದಲ್ಲಿ ನೂರು ಕೋಟಿ ಕ್ಲಬ್ ಸೇರುವಂತಹ ಚಿತ್ರಗಳು ಬರಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು ಎನ್ನುತ್ತಿದ್ದ ಸಿನಿ ಪ್ರೇಮಿಗಳಿಗೆ, ಗಾಂಧಿನಗರದ ಮಂದಿಗೆ, ‘ಕೆಜಿಎಫ್’ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಕನ್ನಡಿಗರು ಹೆಮ್ಮೆಪಡುವಂತೆ ಕ್ರೇಜ್ ಹುಟ್ಟು ಹಾಕಿದೆ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಚಿತ್ರ.

#sandalwood #kannadamovies #rockingstaryash #yashandprashantneel #kgfcollection #kgfinpakisthan #balkaninews

Tags