ಸುದ್ದಿಗಳು

‘ಕೆಜಿಎಫ್’ ಚಿತ್ರಕ್ಕೆ ಶುಭಕೋರಿದ ಬಾಲಿವುಡ್ ಸ್ಟಾರ್

ಬಾಲಿವುಡ್ ಜನಪ್ರಿಯ ನಟ ಫರ್ಹಾನ್ ಅಖ್ತರ್

 

ಬೆಂಗಳೂರು, ನ.07: ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೆಜಿಎಫ್’ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಏಕ ಕಾಲಕ್ಕೆ ದೇಶಾದ್ಯಂತ  ಸಿನಿಮಾ ತೆರೆಕಾಣಲಿದೆ.

ಟ್ವಿಟರ್ ನಲ್ಲಿ ವಿಶ್ ಮಾಡಿದ ಫರ್ಹಾನ್ ಅಖ್ತರ್

ಕನ್ನಡ ಚಿತರಂಗದಲ್ಲಿ ಅಲ್ಲದೇ ಬಾಲಿವುಡ್ ಚಿತ್ರರಂಗದಲ್ಲಿ ಸಿನಿಮಾ ಕ್ರೇಜ್ ಹೆಚ್ಚಾಗಿದ್ದು, ಬಾಲಿವುಡ್ ನ ಖ್ಯಾತ ನಟ  ಫರ್ಹಾನ್ ಅಖ್ತರ್ ಕೂಡ ಕೆಜಿಎಫ್ ಸಿನಿಮಾಗೆ ವಿಶ್ ಮಾಡಿದ್ದಾರೆ.

ದೇಶದಾದ್ಯಂತ ‘ಕೆಜಿಎಫ್’ ಹವಾ ಜೋರಾಗಿದ್ದು, ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವಾಗಲೇ, ಬಾಲಿವುಡ್ ನಟ ಫರ್ಹಾನ್ ‘ಕೆಜಿಎಫ್’ ಚಿತ್ರದ ಪೋಸ್ಟರ್ ನನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕುವ ಮೂಲಕ “ಪರಿಚಯಿಸುತ್ತಿದ್ದೇವೆ,  ಕೋಲಾರದ ಚಿನ್ನದ ಗಣಿ, ಅಪ್ಪಟ ಚಿನ್ನವಿದು, ಚಿನ್ನದಲ್ಲಿ ಶಕ್ತಿಯಿದೆ – ಸಂಪತ್ತಿದೆ, ಈತನ ಶಕ್ತಿ ಸಂಪತ್ತುಗಳೇ ಚಿನ್ನ, ಸಂಪತ್ತು ಒಲಿಯುವುದೇ  ವೀರರಿಗೆ, ಧೀರರಿಗೆ, ಶಕ್ತಿಶಾಲಿಗಳಿಗೆ” ಎಂದು ಯಶ್ ಚಿತ್ರಕ್ಕೆ ಶುಭ ಕೋರಿದ್ದಾರೆ.

ಫರ್ಹಾನ್ ಶೇರ್ ಮಾಡಿರುವ ‘ಕೆಜಿಎಫ್’ ಪೋಸ್ಟರ್ ನಲ್ಲಿ ಮುಂಬೈನ ಗಲ್ಲಿಯಿಂದ ರಕ್ತ ಸಿಕ್ತ ಕೋಲಾರದ ಚಿನ್ನದ ಗಣಿಯವರೆಗೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದರ ಜೊತೆಗೆ ಗಣಿ ಕಾರ್ಮಿಕರ ನಾಯಕನ ರೀತಿಯಲ್ಲಿ ಬೆನ್ನನ್ನು ತೋರಿಸಿ ಪೋಸ್ಟರ್ ಗೆ ಪೋಸ್  ಕೊಟ್ಟಿದ್ದಾರೆ. ಇನ್ನು ಪೋಸ್ಟರ್ ನಲ್ಲಿ ಇದೇ ಡಿಸೆಂಬರ್ 21 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು  ದಿನಾಂಕ ಕೂಡ ತಿಳಿಸಿದ್ದಾರೆ.ಬಹುತಾರಾಗಣದ ಸಿನಿಮಾ

‘ಕೆಜಿಎಫ್’ ಚಿತ್ರದಲ್ಲಿ ಯಶ್ ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದು, ಅನಂತ್ ನಾಗ್, ರಮ್ಯಾ ಕೃಷ್ಣ, ಅಚ್ಯುತ್ ರಾವ್, ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ.  ಈ ಸಿನಿಮಾಗೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಚೀನೀ ಭಾಷೆಯಲ್ಲಿ ಡಬ್ ಮಾಡಲಾಗುವುದು ಎನ್ನಲಾಗಿದೆ.

ಬಾಲಿವುಡ್ ನಟ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿದ್ವಾನಿ ಜಂಟಿಯಾಗಿ ಈ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

 

Tags