ಸುದ್ದಿಗಳು

ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿದ ‘ರಾಜಾಹುಲಿ’

ಡಿಸೆಂಬರ್ ನಲ್ಲಿ ಕೆಜಿಎಫ್ ಬಿಡುಗಡೆ?

ಬೆಂಗಳೂರು, ಅ.11: ಬಹುನಿರೀಕ್ಷಿತ ಯಶ್ ಅಭಿನಯದ ಕೆಜಿಎಫ್ ಚಿತ್ರ ರಿಲೀಸ್ ಡೇಟ್ ಮತ್ತೆ  ಮುಂದೂಡಲಾಗಿದೆ. ನವೆಂಬರ್ 16ಕ್ಕೆ ಬಿಡುಗಡೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಫಿಲ್ಮಂ ಡೇಟ್ ಅನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 21 ರಂದು ಕೆಜಿಎಫ್ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ತಿಂಗಳು ಯಶ್ ಗೆ ಅದೃಷ್ಟವಂತೆ. ಆದ್ದರಿಂದಲೇ ಡಿಸೆಂಬರ್ ತಿಂಗಳಲ್ಲಿ ಫಿಲ್ಮಂ ರಿಲೀಸ್ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿವೆ. ಮತ್ತೊಂದು ಮೂಲಗಳ ಪ್ರಕಾರ, ಇನ್ನೂ ಸ್ವಲ್ಪ ಚಿತ್ರೀಕರಣ ಬಾಕಿ ಇದೆ ಅಂತೆ. ಈ ಕಾರಣಕ್ಕಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತಿದೆ ಎನ್ನಲಾಗಿದೆ.ಅಕ್ಟೋಬರ್ 16 ರಂದು ಟ್ರೈಲರ್ ರಿಲೀಸ್

‘ಕೆಜಿಎಫ್’ ರಿಲೀಸ್‍ ಗಾಗಿ ಎರಡೂವರೆ ವರ್ಷಗಳಿಂದ ಕಾಯುತ್ತಿರುವ ರಾಜಾಹುಲಿ ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮೂಡಿದೆ. ತಮ್ಮ ನೆಚ್ಚಿನ ರಾಜಾಹುಲಿ ಘರ್ಜನೆಗಾಗಿ ಕಾಯುತ್ತಿದ್ದ ಚಿತ್ರಪ್ರೇಮಿಗಳಿಗೆ ಸಂಭ್ರಮ ಮರೀಚಿಕೆಯಾದಂತಾಗಿದೆ. ರಾಕಿಂಗ್ ಸ್ಟಾರ್ ಅಬ್ಬರ ಪರದೆ ಮೇಲೆ ವೀಕ್ಷಿಸಲು ಬಕಪಕ್ಷಿಗಳಂತೆ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೆ ಬೇಸರ ಮೂಡಿದೆ. ‘ಕೆಜಿಎಫ್’ ಟ್ರೈಲರ್ ಅಕ್ಟೋಬರ್ 16 ಮತ್ತು ಇದರ ಒಂದು ತಿಂಗಳ ನಂತರ ನವೆಂಬರ್ 16ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಯಶ್ ಟ್ವೀಟರ್ ಮತ್ತು ಫೇಸ್‍ಬುಕ್‍ ನಲ್ಲಿ ಹಾಕಿಕೊಂಡಿದ್ದರು.ಐದು ಭಾಷೆಗಳಲ್ಲಿ ಕೆಜಿಎಫ್

‘ಕೆಜಿಎಫ್’ ಒಟ್ಟು 5 ಭಾಷೆಗಳಲ್ಲಿ ಬಿಡುಗಡೆಯಾಗುವ ಚಿತ್ರವಾಗಿದೆ. 5 ಭಾಷೆಗಳ ಪೈಕಿ ಮೊದಲು ಬಿಡುಗಡೆಯಾಗುವುದು ಕನ್ನಡದ ಚಿತ್ರ. ಇದಕ್ಕಾಗಿಯೇ ‘ರಾಜಾಹುಲಿ’ ಇತ್ತೀಚೆಗಷ್ಟೇ ಬಾಲಿವುಡ್ ಗೆ ತೆರಳಿ ಅಲ್ಲಿನ ನಿರ್ಮಾಪಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದು ಕೂಡ ಚಿತ್ರ ಮುಂದೂಡುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಟ್ರೈಲರ್ ಡೇಟ್‍ ಗೆ ಕೇವಲ 4 ದಿನಗಳು ಬಾಕಿ ಇರುವಾಗ ದಿಡೀರ್ ದಿನಾಂಕವನ್ನು ಮುಂದೂಡುವುದು ಯಾವ ನ್ಯಾಯ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

Tags