ಸುದ್ದಿಗಳು

ದರ್ಶನ್ ಸಿನಿಮಾಗೆ ಬಂದ್ರು ‘ಕೆಜಿಎಫ್’ ಸಂಭಾಷಣೆಕಾರ

ಬೆಂಗಳೂರು, ಫೆ.12:

‘ಕೆಜಿಎಫ್’ ಸಿನಿಮಾ ಈಗಾಗಲೇ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಬಿಡುಗಡೆಯಾದಾಗಿನಿಂದಲೂ ಇಲ್ಲಿಯವರೆಗೂ ಆ ಸಿನಿಮಾದ ನಾಗಾಲೋಟ ಇನ್ನು ನಿಂತಿಲ್ಲ. ಇದು ಸತ್ಯ ಕೂಡ ಹೌದು, ಈ ಸಿನಿಮಾದ ಪ್ರತಿಯೊಂದು ದೃಶ್ಯ, ಪ್ರತಿಯೊಂದು ಡೈಲಾಗ್ ಕೂಡ ಅಭಿಮಾನಿಗಳ ಮನ ಹೊಕ್ಕಿದೆ. ಅದು ಯಾವತ್ತು ಮಾಸುವುದಿಲ್ಲ ಅನ್ನೋದು ಹಲವರ ಮಾತು. ಇನ್ನು ಈ ಸಿನಿಮಾ ಡೈಲಾಗ್ ಬಗ್ಗೆ ಮಾತಾಡೋ ಹಾಗಿಲ್ಲ ಬಿಡಿ. ಆ ರೀತಿ ಇದೆ.

‘ರಾಬರ್ಟ್‌’ ಗೆ ಸಂಭಾಷಣಾಕಾರ ಚಂದ್ರಮೌಳಿ

ಸೆಂಟಿಮೆಂಟಲ್, ಮಾಸ್ ಹೀಗೆ ಎಲ್ಲರಿಗೂ ಹೊಂದಿಕೊಳ್ಳುವ ರೀತಿಯಲ್ಲಿ ಈ ಸಿನಿಮಾ ಡೈಲಾಗ್ ಬರೆಯಲಾಗಿದೆ. ಇದರ ಎಲ್ಲಾ ಕ್ರೆಡಿಟ್ ಸಂಭಾಷಣಾಕಾರ ಚಂದ್ರಮೌಳಿಗೆ ಸೇರಬೇಕು. ಅಷ್ಟೇ ಅಲ್ಲ ಈ ಸಿನಿಮಾ ಹಿಟ್ ಆಗುವುದಕ್ಕೆ ಸಂಭಾಷಣೆ ಕೂಡ ಒಂದು ಭಾಗ ಅಂದ್ರೆ ತಪ್ಪಾಗಲ್ಲ. ಇದೀಗ ಈ ಸಿನಿಮಾದಲ್ಲಿ ಡೈಲಾಗ್‌ ನ ಕೌಟಂರ್ ನಿರ್ಮಿಸಿದ್ದ ಈ ಸಂಭಾಷಣೆಕಾರ ಇದೀಗ ದರ್ಶನ್ ಮುಂದಿನ ಸಿನಿಮಾಗೂ ಸಂಭಾಷಣೆ ಬರೆಯುತ್ತಿದ್ದಾರೆ.

ಖಡಕ್ ಡೈಲಾಗ್ ಸಕ್ಸಸ್ ಆಗುತ್ತಾ..?

ಹೌದು, ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಗೆ ಚಂದ್ರಮೌಳಿ ಸಂಭಾಷಣೆ ಕೊಡುತ್ತಿದ್ದಾರಂತೆ. ನಿರ್ದೇಶಕ ತರುಣ್ ಸುಧೀರ್ ಇವರನ್ನು ಕರೆತಂದು ಅದ್ಬುತ ಡೈಲಾಗ್ ಬರೆಯಲು ಕರಿಸಿದ್ದಾರಂತೆ. ಈಗಾಗಲೇ ಸೆಕೆಂಡ್ ಆಫ್ ಸಂಭಾಷಣೆ ಮುಂದುವರೆಸಲಾಗಿದ್ದು, ಇದೀಗ ಮೊದಲನೇ ಭಾಗದ್ದು ಮುಂದಿನ ದಿನಗಳಲ್ಲಿ ಪೂರೈಸಲಾಗುತ್ತೆ ಅಂತಾ ಹೇಳಲಾಗುತ್ತಿದೆ. ಅದ್ಬುತ ನಟ, ಸೂಪರ್ ನಿರ್ದೇಶಕನ ಜೊತೆ ಚಂದ್ರ ಮೌಳಿಯವರ ಖಡಕ್ ಡೈಲಾಗ್ ಈ ಎಲ್ಲವೂ ಒಂದೇ ಚಿತ್ರದಲ್ಲಿರುವಾಗ ಸಿನಿಮಾ ಸಕ್ಸಸ್ ಆಗೋದ್ರಲ್ಲಿ ಡೌಟೇ ಇಲ್ಲ ಅನ್ನೋದು ಹಲವರ ಮಾತು.

ದರ್ಶನ್ ಅಭಿಮಾನಿ ಕೇಳಿದ ಪ್ರಶ್ನೆಗೆ ಪುನೀತ್ ರಾಜ್ ಕುಮಾರ್ ಕೊಟ್ಟ ಉತ್ತರವೇನು..??

#sandalwood #kannadamovies #scriptwriterchandramouli

Tags