ಸುದ್ದಿಗಳು

‘ಕೆಜಿಎಫ್’ ಸಕ್ಸಸ್ ಟೂರ್!!

100 ಕೋಟಿ ರೂಪಾಯಿ ದಾಟಿದ ಕೆಜಿಎಫ್!!

ಹೈದರಾಬಾದ್,ಡಿ.26: ‘ಕೆಜಿಎಫ್’ ‘ಕೆಜಿಎಫ್’ .. ಎಲ್ಲಿ ನೋಡಿದರಲ್ಲಿ ‘ಕೆಜಿಎಫ್’.. ಈಗ  ಚಿತ್ರತಂಡ ‘ಯಶೋಯಾತ್ರೆ’ ಕೈಗೊಂಡಿದೆ. ‘ಕೆಜಿಎಫ್’ ಯಶಸ್ಸು ಪಡೆಯಲು ಅಭಿಮಾನಿಗಳ ಸಹಕಾರವೇ  ಇಂದು ಚಂದನವನವನ್ನು ಎಲ್ಲಾ ಭಾಷಿಗರು ತಿರುಗಿ ನೋಡುವಂತೆ ಮಾಡಿದೆ. ಇದಕ್ಕೆ ಕಾರಣಕರ್ತರಾದ ಸಿನಿರಸಿಕರಿಗೆ ಧನ್ಯವಾದ ಅರ್ಪಿಸೋದಕ್ಕೆ ಚಿತ್ರತಂಡ ಮುಂದಾಗಿದೆ.

100 ಕೋಟಿ ರೂಪಾಯಿ

‘ಕೆಜಿಎಫ್’ ನಾಲ್ಕನೇ ದಿನಕ್ಕೆ 75 ಕೋಟಿ ರೂಪಾಯಿ ಕಲೆಕ್ಷನ್ ದಾಟಿ 100 ಕೋಟಿ ರೂಪಾಯಿ ಗಳಿಸಿದೆ.. ಇದುವರೆಗೂ ಕನ್ನಡ ಸಿನಿಮಾ 100 ಕೋಟಿ ಗಳಿಸಿರಲಿಲ್ಲ. ಹೀಗಾಗಿ ‘ಕೆಜಿಎಫ್’ ಗಳಿಕೆ ಹೊಸ ದಾಖಲೆಯನ್ನೇ ಸೃಷ್ಟಿಸಿದೆ..

ತಿರುಪತಿಯಲ್ಲಿರುವ ಸಂಧ್ಯಾ ಥಿಯೇಟರ್


ಯಶ್ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.. ರಾಕಿಂಗ್‍ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್, ಭುವನ್‍ಗೌಡ, ಒಟ್ಟಾಗಿ ಹೈದರಬಾದ್ ಕಡೆ ಪಯಣ ಬೆಳೆಸಿದ್ದಾರೆ.. ಇಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ತಿರುಪತಿಯಲ್ಲಿರುವ ಸಂಧ್ಯಾ ಥಿಯೇಟರ್‍ ಗೆ ಭೇಟಿ ನೀಡಲಿದ್ದಾರೆ.

ವಿಜಯವಾಡದ ಟ್ರೆಂಡ್ ಸೆಟ್ ಮಾಲ್

ಅಲ್ಲಿ ಅಭಿಮಾನಿಗಳೊಂದಿಗೆ ಕೆಲ ಕಾಲ ಮಾತನಾಡಿ ನಂತರ ವಿಜಯವಾಡಕ್ಕೆ  ಪ್ರಯಾಣ ಬೆಳೆಸಲಿದ್ದಾರೆ.ಅಲ್ಲಿಂದ ನಂತರ 12.30ರ  ಸಮಯಕ್ಕೆ ವಿಜಯವಾಡದ ಟ್ರೆಂಡ್ ಸೆಟ್ ಮಾಲ್‍ ಗೆ  ಭೇಟಿ ನೀಡಿ ಸಂಜೆ 4 ಗಂಟೆಗೆ ವೈಜಾಗ್‍ನ ಶರತ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಲ್ಲಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲಿದ್ದಾರೆ…

 

Tags