ಸುದ್ದಿಗಳು

ವಿವಾಹದ ಸಂಭ್ರಮದಲ್ಲಿರುವ ‘ಕೆಜಿಎಫ್’ ಚಿತ್ರದ ವಿಲನ್

ಬೆಂಗಳೂರು, ಏ.16:

‘ಕೆಜಿಎಫ್’ ಚಿತ್ರ ಸದ್ಯ ತನ್ನ ನಾಗಾಲೋಟ ಮುಂದುವರೆಸಿದೆ. ಇನ್ನೂ ಹೌಸ್ ಫೂಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಬಹು ಭಾಷೆಯಲ್ಲೂ ಬಿಡುಗಡೆ ಕಂಡು ಯಶಸ್ವಿಯಾಗಿತ್ತು. ಇನ್ನು ಈ ಚಿತ್ರದಲ್ಲಿ ಹೀರೋನಂತೆ ವಿಲನ್ ಪಾತ್ರಗಳು ಕೂಡ ಮುಖ್ಯವಾಗಿದ್ದವು. ಈ ಸಿನಿಮಾದಲ್ಲಿ ನಟಿಸಿದ ವಿಲನ್‌ಗಳಿಗೆ ಈ ಸಿನಿಮಾದ ನಂತರ ಹಲವಾರು ಅವಕಾಶಗಳು ಕೂಡ ಸಿಕ್ಕಿವೆ.

ಕೇರಳ ಸಂಪ್ರದಾಯದಂತೆ ಮದುವೆ

ಬಹಳಷ್ಟು ಜನ ವಿಲನ್‌ ಗಳಿಂದಲೇ ತುಂಬಿದ್ದ ಕೆಜಿಎಫ್ ಚಿತ್ರದಲ್ಲಿ ಜಾನ್ ಕೊಕೇನ್ ಕೂಡ ಒಬ್ಬರು. ಇವರ ಪಾತ್ರವೂ ಬಹುಮುಖ್ಯವಾಗಿತ್ತು. ವಿಶೇಷ ಅಂದರೆ ಈ ಖಳನಾಯಕನಿಗೆ ಇದೀಗ ವಿವಾಹವಾಗಿದೆ. ಕೇರಳ ಮೂಲಕ ಪ್ರಿಯಾ ರಾಮಚಂದ್ರನ್ ಅವರನ್ನು ವಿವಾಹವಾಗಿದ್ದಾರೆ ಈ ನಟ. ನಿನ್ನೆಯಷ್ಟೆ ವಿವಾಹ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಇನ್ನು ತುಂಬಾ ಸರಳವಾದ ವಸ್ತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಈ ಜೋಡಿ. ಇನ್ನೂ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ನಟ, ನನ್ನ ಜೀವನದ ಗೆಳತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದು ಪಕ್ಕಾ ಕೇರಳ ಸಂಪ್ರದಾಯದಂತೆ. ನನ್ನ ಪ್ರಯಾಣ ಇವಾಗ ಪ್ರಾರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.

ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಖಳನಾಯಕ

‘ಪೃಥ್ವಿ’ ಸಿನಿಮಾ ಮೂಲಕ ಖಳನಾಯಕನಾಗಿ ಎಂಟ್ರಿಯಾದ ನಟ, ಶಿವರಾಜ್‌ ಕುಮಾರ್, ಪುನೀತ್ ರಾಜ್‌ಕುಮಾರ್, ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆಯಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡ ಅಷ್ಟೇ ಅಲ್ಲದೆ ಬಹುಭಾಷೆಯಲ್ಲೂ ನಟಿಸಿದ್ದಾರೆ. ಸದ್ಯ ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿಗೆ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

ಕೆಜಿಎಫ್-2 ಚಿತ್ರದ ಹಾಡುಗಳ ರೆಕಾರ್ಡಿಂಗ್ ಶುರು!!

#balkaninews #kgf #johnkokken #sandalwood #kannadamovies #kgfkannadamovie #johnkokkenmovies

Tags