ಸುದ್ದಿಗಳು

ಕೊನೆಗೂ ‘ಕೆಜಿಎಫ್’ ಬಿಡುಗಡೆಗೆ ಮುಹೂರ್ತ ಸಿಕ್ಕೇ ಬಿಡ್ತು

ಕೆಜಿಎಫ್’ ಚಿತ್ರದಲ್ಲಿ ಯಶ್ ವಿಭಿನ್ನ ಗೆಟಪ್

ಬೆಂಗಳೂರು,ಸೆ.11: ರಾಕಿಂಗ್‌ಸ್ಟಾರ್ ಯಶ್ ಸಿನಿಮಾ ಅಂದರೇನೆ ಹಾಗೆ ಸಿನಿಮಾ ಸೆಟ್ಟೇರಿದಾಗಿನಿಂದ್ಲೂ ಒಂದಲ್ಲಾ ಒಂದು ಸುದ್ದಿಯಿಂದ ಸದಾ ಸದ್ದು ಮಾಡುತ್ತಿರುತ್ತದೆ.. ಚಂದನವನದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್‌’ ವನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯ್ತಿರೋ ಅಭಿಮಾನಿಗಳಿಗೆ ಇದೀಗ ಮತ್ತೊಂದು ಹೊಸ ಸುದ್ದಿ ಚಿತ್ರತಂಡದಿಂದ ಸಿಕ್ಕಿದೆ.. ಹಾಗಿದರೆ ಅದೇನಪ್ಪ ಹೊಸ ಸುದ್ದಿ ಅಂತೀರಾ..? ನೋಡಿ.

ರಾಕಿಂಗ್ ಸ್ಟಾರ್ ಯಶ್​ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಕೆಜಿಎಫ್’ ಬಿಡುಗಡೆ ದಿನಾಂಕ

ಇದೇ ತಿಂಗಳು 19ರ ಸಂಜೆ 6 ಗಂಟೆಗೆ ‘ಕೆಜಿಎಫ್’ ಬಿಡುಗಡೆ ಆಗಲಿರುವ ದಿನಾಂಕ​ ಪ್ರಕಟವಾಗಲಿದೆ. ಅಂದೇ ಈ ಚಿತ್ರದ ಟ್ರೈಲರ್ ಯಾವಾಗ  ಶೀರ್ಷಿಕೆ ಆಗಲಿದೆ ಎಂಬುದು ರಿವೀಲ್ ಆಗಲಿದೆ.

ಇನ್ನು ‘ಕೆಜಿಎಫ್’ ಚಿತ್ರದಲ್ಲಿ ಯಶ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ನಟಿ ತಮನ್ನಾ ಭಾಟಿಯಾ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ನೀಲ್. ಮಿಕ್ಕಂತೆ ಅಚ್ಯುತ್ ಕುಮಾರ್, ವಸಿಷ್ಠ ಸಿಂಹ ಮುಂತಾದವರು ನಟಿಸಿದ್ದಾರೆ.

 

Tags