ಸುದ್ದಿಗಳು

ಕೆಜಿಎಫ್ ಚಾಪ್ಟರ್ 2 ನಲ್ಲಿ ಮುನ್ನ ಭಾಯ್!!

ಬೆಂಗಳೂರು,ಫೆ.11

: ಕೆಜಿಎಫ್ ಚಾಪ್ಟರ್ 1 ರ ಹವಾ ಇನ್ನೂ ಮುಗಿದಿಲ್ಲ.. ಈಗಾಗಲೇ 243 ಕೋಟಿ ಬಾಚಿ ಇನ್ನೂ ವಿಶ್ವದಾದ್ಯಂತ  ಇನ್ನೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.. ಅಮೆಜಾನ್ ಪ್ರೈಂ ನಲ್ಲಿ ಕೆಜಿಎಫ್ ಬಿಡುಗಡೆಯಾದರೂ ಕೂಡ ಥಿಯೇಟರ್ ನಲ್ಲಿ ಕೆಜಿಎಫ್ ಹವಾ ಹಾಗೆಯೇ ಇದೆ..

ಚಾಪ್ಟರ್ 1ರಲ್ಲಿ ನಾನು ನಟಿಸುವುದಿಲ್ಲ

ಚಾಪ್ಟರ್ 1ರಲ್ಲಿ ನಾನು ನಟಿಸುವುದಿಲ್ಲ ಎಂದಿದ್ದ ಬಾಲಿವುಡ್‌ನ ಹೆಸರಾಂತ ನಟ ಇದೀಗ ಕೆಜಿಎಫ್ ಚಿತ್ರ ಭಾಗವಾಗಲು ರೆಡಿಯಾಗಿದ್ದಾರೆ… ಚಿತ್ರದ ಭರ್ಜರಿ ಯಶಸ್ಸನ್ನು ಕಂಡ ನಂತರ ಚಾಪ್ಟರ್ 2ನಲ್ಲಿ ಅಭಿನಯಿಸುವುದಕ್ಕೆ  ಒಪ್ಪಿದ್ದಾರೆ.

Image result for sanjaydutt in kgf

ಬಾಲಿವುಡ್ ಮುನ್ನಾ ಭಾಯ್ ಸಂಜಯ್ ದತ್  

ಕೆಜಿಎಫ್ 2 ನಲ್ಲಿ ಇದೀಗ ಬಾಲಿವುಡ್ ಮುನ್ನಾ ಭಾಯ್ ಸಂಜಯ್ ದತ್  ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.. 80-90 ದಶಕದ ರೀತಿಯಲ್ಲಿ ಸಾಗುವ ಕಥೆಯಾದ್ದುದರಿಂದ ಇತ್ತೀಚಿನ ದಿನಗಳಲ್ಲಿ ಸಂಜಯ್ ಗಡ್ಡಕ್ಕೆ ಕತ್ತರಿ ಹಾಕಿಲ್ಲ ಎಂದು ಹೇಳಲಾಗುತ್ತಿದೆ…

Tags