ಸುದ್ದಿಗಳು

‘ಕೆಜಿಎಫ್’ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು??

ಅಭೀ ಪಿಕ್ಚರ್ ಬಾಕಿ ಹೈ’

ಬೆಂಗಳೂರು,ನ.9:ರಾಕಿಂಗ್​ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆ.ಜಿ.ಎಫ್​ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದ್ದು, ಸಖತ್ ಆಗಿ ತೆರೆ ಮೇಲೆ ಮೂಡು ಬಂದಿದೆ.. ಸತತ ಎರಡು ವರ್ಷಗಳ ಚಿತ್ರೀಕರಣ, ಯಶ್​ ನ ಖಡಕ್ ಗೆಟಪ್​, ಪ್ರಶಾಂತ್ ನೀಲ್ ನಿರ್ದೇಶನ, ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಲು ಇದೇ ಡಿ.21 ರಂದು ಬಿಡುಗಡೆಯಾಗಲಿದೆ..

Image result for kgf

ವರ್ಷ ನಾನು ಇದಕ್ಕೆ ಶ್ರಮಿಸಿದ್ದೇನೆ

ಇನ್ನು ಕೆಜಿಎಫ್ ಚಿತ್ರದ ಬಗ್ಗೆ ಯಶ್ ಮಾತನಾಡಿದ್ದು, ಕೆಜಿಎಫ್ ಬರೀ ಯಶ್ ಸಿನಿಮಾ ಅಲ್ಲ. ಇದು ಕನ್ನಡ ಸಿನಿಮಾದ ಶಕ್ತಿಯನ್ನ ತೋರಿಸುವಂತ ಸಿನಿಮಾ. ಕನ್ನಡಿಗರ ತಾಕತ್ತು ಏನು ಅನ್ನೋದು ಇಡೀ ಬಾರತಕ್ಕೆ ಗೊತ್ತಾಗಬೇಕಿದೆ. ಇದು ನನ್ನ ಕನಸು ಆಗಿತ್ತು.ಈಗ ಅದು ನೆರವೇರಿದೆ. ಈ ಸಿನಿಮಾ ಬಗ್ಗೆ ಹಾಗೂ ಸಿನಿಮಾ ಮಾಡಿರುವ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ೨ ವರ್ಷ ನಾನು ಇದಕ್ಕೆ ಶ್ರಮಿಸಿದ್ದೇನೆ.. ೨ ಅಲ್ಲ ೧೦ ವರ್ಷ ಬೇಕಾದ್ರು ಒಂದೊಳ್ಳೆ ಸಿನಿಮಾಗೆ ಮಿಸಲಿಡುತ್ತೇನೆ. ತುಂಬ ಖುಷಿಯಾಗಿದ್ದೇನೆ ಇವತ್ತು.. ‘ಇದು ಟ್ರೈಲರ್ ಅಷ್ಟೇ, ಅಭೀ ಪಿಕ್ಚರ್ ಬಾಕಿ ಹೈ’ ಎಂದು ಯಶ್ ಕೆಜಿಎಫ್ ಸಿನಿಮಾ ಬಗ್ಗೆ ಮನದಾಳದ ಮಾತನ್ನು ಹೇಳಿದ್ದಾರೆ

Tags

Related Articles