ಸುದ್ದಿಗಳು

ಕಾಮನ್ ಮ್ಯಾನ್ ಪವರ್ ತೋರಿಸಿದ ‘ಖಾಕಿ’ ಚಿತ್ರ

‘ಖಾಕಿ’ ಚಿತ್ರ ಸಮಾಜದಲ್ಲಿ ಭ್ರಷ್ಟ ವ್ಯವಸ್ಥೆ ಹೇಗೆ ತಾಂಡವವಾಡುತ್ತಿದೆ. ಅಮಾಯಕರನ್ನು
ರಾಜಕರಣಿಗಳು ತಮ್ಮ ಅಧಿಕಾರದಿಂದ ಹೇಗೆ ಆಟ ಆಡಿಸುತ್ತಿದ್ದಾರೆ ಎನ್ನೋದಕ್ಕ ಹಿಡಿದ
ಕನ್ನಡಿ.

ಹಾಗೆಯೇ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ತನ್ನಿಂದ ಬದಲಾವಣೆ ಆಗೊಲ್ಲ ಎಂದು
ಕೈಕಟ್ಟಿ ಕೂರೋ ಬದಲು ಒಗ್ಗಟ್ಟಾಗಿ ನಿಂತರೆ ಯಾವ ರೀತಿ ಬದಲಾವಣೆಯನ್ನು
ಸಮಾಜದಲ್ಲಿ ತರಬಹುದು ಅನ್ನೋದನ್ನ ನಾಯಕನ ಪಾತ್ರದ ಮೂಲಕ ತೋ ರಿಸಿಕೊಟ್ಟಿದೆ.

ಚಿತ್ರದಲ್ಲಿ ಚಿರು ಕೇಬಲ್ ಆಪರೇಟರ್ ಪಾತ್ರವನ್ನು ನಿರ್ವಹಿಸಿದ್ದು, ತನ್ನೂರಿನಲ್ಲಿನ
ಅವ್ಯವಸ್ಥೆ ವಿರುದ್ದ ಹೋರಾಡೋದಕ್ಕೆ ನಿಲ್ಲು ಯುವ ನಾಯಕನಾಗಿ ಕಾಣಸಿಗಲಿದ್ದಾರೆ.

Image result for khaki kannada movie

ಊರಿನ ಜನರನ್ನು ಒಗ್ಗೂಡಿಸಿ ಅನ್ಯಾಯದ ವಿರುದ್ದ ಸಿಡಿದೇಳುವ ಪಾತ್ರದಲ್ಲಿ ಚಿರು
ಅಬ್ಬರಿಸಿದ್ದಾರೆ. ಅಲ್ಲಲ್ಲಿ ಬರುವ ಮಾಸ್ ಡೈಲಾಗ್ಗಳು ಸಖತ್ ಕಿಕ್ ಕೊಡುತ್ತವೆ.

ಇನ್ನು ಆಕ್ಷನ್ ಸೀಕ್ವೇನ್ಸ್ನಲ್ಲಿ ಚಿರು ತಮ್ಮ ಅಭಿಮಾನಿಗಳಿಗೆ ಮತ್ತಷ್ಟು
ಹತ್ತಿರವಾಗುತ್ತಾರೆ. ಇದ್ರ ನಡುವೆ ರೆಗ್ಯುಲರ್ ಲವ್ ಸ್ಟೋರಿ, ಕಾಮಿಡಿ ಖಾಕಿ ಚಿತ್ರದ
ಅಂದವನ್ನು ಹೆಚ್ಚಿಸಿದೆ.

Image result for khaki kannada movie

ಹೀಗೆ ಒಬ್ಬ ಕಾಮನ್ ಮ್ಯಾನ್ ವ್ಯವಸ್ಥೆ ವಿರುದ್ದ ತಿರುಗಿ ಬಿದ್ರೆ
ಯಾವ ರೀತಿ ಬದಲಾವಣೆ ಉಂಟಾಗುತ್ತೆ ಅನ್ನೋದನ್ನ ಪ್ರಸ್ತುತ ದಿನಗಳಿಗೆ ಹೊಂದುವಂತೆ
ಕಥೆ ಮಾಡಿ,ಅದನ್ನು ಅಷ್ಟೇ ಚೆಂದ ತೆರೆ ಮೇಲೆ ಪ್ರೊಜೆಕ್ಟ್ ಮಾಡಿದ್ದಾರೆ ನಿರ್ದೇಶಕ ನವೀನ್
ರೆಡ್ಡಿ.

ಚಿರು ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿಕೊಂಡ್ರೆ ಇಲ್ಲಿ ಪ್ರೇಕ್ಷಕನಿಗೆ ಇನ್ನಷ್ಟು
ಹತ್ತಿರವಾಗುತ್ತಾರೆ. ತಾನ್ಯ ಹೋಪ್ ಅಭಿನಯದಲ್ಲಿ ಮಾಗಿದ್ದಾರೆ. ಉಳಿದಂತೆ ಎಲ್ಲಾ
ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು.

ಪ್ರತಿಯೊಬ್ಬ ವ್ಯಕ್ತಿಯೂ ನೋಡಲೇ
ಬೇಕಾದ ಚಿತ್ರ ಖಾಕಿ ಅಂದ್ರೆ ತಪ್ಪಾಗೋದಿಲ್ಲ.

 

#KannadaMovie #Khaki #KannadaCinema

Tags