ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ರೋಚಕ ‘ಅನುಭವ’ ನೀಡುವ ‘ಖನನ’

ಮೋಡಿ ಮಾಡುವ ಹೊಸಬರ ತಂಡದ ಸಿನಿಮಾ

ಬೆಂಗಳೂರು.ಮೇ.12: ತನ್ನ ವಿಭಿನ್ನ ಹಾಡುಗಳು ಮತ್ತು ಟ್ರೈಲರ್ ನಿಂದ ಕುತೂಹಲ ಮೂಡಿಸಿದ್ದ ಸಿನಿಮಾಗಳಲ್ಲಿ ‘ಖನನ’ ಕೂಡಾ ಒಂದು. ಈಗಾಗಲೇ ಚಿತ್ರವು ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ಇದೀಗ ಸಿನಿಮಾ ತೆರೆ ಕಂಡಿದ್ದು, ಹೊಸಬರ ಈ ಪ್ರಯತ್ನ ಇಷ್ಟವಾಗುತ್ತದೆ.

ಅಂದ ಹಾಗೆ ಇದೊಂದು ರಿವೇಂಜ್ ಡ್ರಾಮಾ ಕೆಟಗರಿಗೆ ಸೇರಿದ ಸಿನಿಮಾ. ಒಂದೂರಲ್ಲೊಂದು ಕುಟುಂಬ ಇರುತ್ತದೆ. ಗಂಡ ಮತ್ತು ಹೆಂಡತಿ. ಗಂಡನಿಗೆ ಹಳ್ಳಿ ವ್ಯಾಮೋಹ. ಹೆಂಡತಿಯ ಆಸೆ ಏನು ಅಂತ ಸುಲಭಕ್ಕೆ ಗೊತ್ತಾಗುವುದಿಲ್ಲ. ಆದರೆ ಗೊತ್ತಾಗುವ ವೇಳೆ ಮತ್ತೇ ಇನ್ನೇನೋ ಆಗಿರುತ್ತದೆ. ಅದೇನು ಎಂಬುದನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ ಆನಂದಿಸಬೇಕು.

ಇನ್ನು ಚಿತ್ರದಲ್ಲಿ ನಟಿಸಿರುವ ನವ ನಾಯಕ ಆರ್ಯವರ್ಧನ್ ಪಾತ್ರಕ್ಕೆ ತಕ್ಕಂತೆ ದೇಹ ಸೌಂದರ್ಯವನ್ನೂ ಹೆಚ್ಚಿಸಿಕೊಂಡಿರುವುದಷ್ಟೇ ಅಲ್ಲ, ನಟನೆಯಲ್ಲೂ ನೋಡುಗರನ್ನು ಸೆಳೆಯುತ್ತಾರೆ. ಅದೇ ರೀತಿ ನಾಯಕಿ ಕರಿಷ್ಮಾ, ಯುವ ಕಿಶೋರ್, ಅವಿನಾಶ್, ವಿನಯಾ ಪ್ರಸಾದ್ ಓಂ ಪ್ರಕಾಶ್ ರಾವ್ ಸೇರಿದಂತೆ ಸೇರಿದಂತೆ ಅನೇಕರ ಅಭಿನಯ ಗಮನ ಸೆಳೆಯುತ್ತದೆ. ಅದರಲ್ಲೂ ನಾಯಿಯ ಪಾತ್ರ ಕುತೂಹಲ ಮೂಡಿಸುತ್ತದೆ.

ಈ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಮೂಡಿ ಬಂದಿದ್ದು, ನವ ನಿರ್ದೇಶಕ ರಾಧಾ ನಿರೂಪಣೆಯಲ್ಲಿ ಹೊಸತನ ಮತ್ತು ಚುರುಕುತನವಿದೆ. ಹಾಗೆಯೇ ಪೂರಕವಾಗಿ ಚಿತ್ರದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮೂಡಿ ಬಂದಿದೆ.

ಸಾಮಾನ್ಯವಾಗಿ ನಿರ್ಮಾಪಕರೊಬ್ಬರ ಮಗ ನಾಯಕನಟರಾಗಿ ಕಾಣಿಸಿಕೊಂಡಾಗ ಅಂತಹ ಚಿತ್ರದಲ್ಲಿ ಸಿಕ್ಕಾಪಟ್ಟೇ ಆ್ಯಕ್ಷನ್ ಮತ್ತು ಸಿಕ್ಸ್ ಪ್ಯಾಕ್ ಪ್ರದರ್ಶನ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅವೆಲ್ಲವನ್ನು ಬಿಟ್ಟು, ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುವುದು ಚಿತ್ರದ ಹೆಗ್ಗಳಿಕೆ.

ಇದೊಂದು ಹೊಸಬರ ತಂಡದ ಚಿತ್ರವಾಗಿದ್ದರೂ ಸಹ ಚಿತ್ರವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಮನರಂಜಿಸುವ ಪ್ರೀತಿ, ಮೋಸ, ದ್ವೇಷ, ಸಂಬಂಧ, ಅನುಬಂಧ ಇತ್ಯಾದಿ ವಿಷಯಗಳಿವೆ. ಹಾಗೆಯೇ ಕಚಗುಳಿ ಕೊಡುವ ಸನ್ನಿವೇಶಗಳು ಸಹ ಇವೆ. ಖಂಡಿತಾ ಈ ಸಿನಿಮಾ ನೀವು ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ.

ಮಗ, ಮಗಳೊಂದಿಗೆ ಅನಿರುದ್ದ ಟಿಕ್ ಟಾಕ್..!!!

#khanana, #movie, #review, #balkaninews #filmnews. #kannadasuddigalu

Tags