ಸುದ್ದಿಗಳು

‘ಕೀ ಕೀ ಚಾಲೇಂಜ್’ ಗೆ ಸಡ್ಡೊಡೆದು ಟುವ್ವಿ ಟುವ್ವಿ ಚಾಲೆಂಜ್ ಸೃಷ್ಟಿಸಿದ ಸಿಂಧೂ…!!!

ಕೀ ಕೀ ಹಾಡಿನ ಚಾಲೇಂಜ್ ಸ್ವೀಕರಿಸಿದ ಸಿಂಧೂ ಲೋಕನಾಥ್

ಸ್ವಲ್ಪ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ‘ಕೀ-ಕೀ’ ಚಾಲೇಂಜ್ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೀ ಕೀ ಹಾಡಿನ ಬದಲಾಗಿ , ನಟಿ ಸಿಂಧೂ , ಆನಂದ್ ಚಿತ್ರದ ‘ಟುವ್ವಿ ಟುವ್ವಿ’ ಹಾಡಿಗೆ ನೃತ್ಯ ಮಾಡಿದ್ದಾರೆ.

ಬೆಂಗಳೂರು, ಆ.23: ‘ಕೀ ಕೀ’ ಚಾಲೇಂಜ್ ಅಪಾಯವೆಂದರೂ ಸಹ, ಈ ಚಾಲೇಂಜ್ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಆದರೂ ಸಹ ಕೆಲವರು ಮತ್ತೆ ಮತ್ತೆ ಈ ಚಾಲೇಂಜ್ ಅನ್ನು ಸ್ವೀಕರಿಸುತ್ತಾ ಬಂದಿದ್ದಾರೆ.

ಇದೀಗ ಈ ‘ಕೀ ಕೀ’ ಚಾಲೇಂಜ್ ಗೆ ಬದಲಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಆನಂದ್’ ಚಿತ್ರದ ‘ಟುವ್ವಿ ಟುವ್ವಿ’ ಚಾಲೆಂಜನ್ನು ಚಂದನವನದ ಚೆಲುವೆ ಸಿಂಧು ಲೋಕನಾಥ್ ಅವರು ಪ್ರಾರಂಭಿಸಿದ್ದಾರೆ.

‘ಆನಂದ್’ ಚಿತ್ರದ ಹಾಡು

ನಟಿ ಸಿಂಧೂ ಲೋಕನಾಥ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದು, ಅದರಲ್ಲಿ ಅವರು ಚಲಿಸುತ್ತಿರುವ ಸ್ಕೂಟಿಯಿಂದ ಇಳಿದು ಟುವ್ವಿ ಟುವ್ವಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ಚಾಲೆಂಜ್ ಸ್ವೀಕರಿಸಿ

“ಇದು ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ ‘ಟುವ್ವಿ ಟುವ್ವಿ ಚಾಲೆಂಜ್. ಇದನ್ನು ನಮ್ಮ ಕನ್ನಡಿಗರೆಲ್ಲರು ಸ್ವೀಕರಿಸಿ, ಹಾಗೇ ಶಿವಣ್ಣನ ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಿ” ಎಂದು ಸಿಂಧು ಹೇಳಿದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

This is called drake ko brake lagao.. . Ok guys enuf of #kikichallenge . Let’s get local. So all u kannadiga’s out there, all #shivanna fans out there take up this #tuvituvichallenge. Tag shivanna, tag me.. I challenge @pawankumarfilms @d12thman @sauravlokesh @sathish_ninasam_official @bhavanaa_raao @eyeofvicto to take up this #tuvituvichallenge and post a video. . . #musically #shivannafans #kannadamusically #sandalwood #kannadamovies #musicallyvideo #kannadamusical.ly #kannadadubsmash #kannadaindustry #kannadigas #sandalwoodstudios #namcinema #shivarajkumar #shivarajkumar.fans #shivarajkumarabhimani #sandalwood_actorss #karnataka_filmywood #trollmava #trollanthammas Behind the scenes credit: @avigolecha & @thoshita

A post shared by Sindhu Loknath (@sindhuloknath) on

ಚಾಲೇಂಜ್ ಗಳು

ನಟ ಪುನೀತ್ ಅವರು ಈಗಾಗಲೇ ‘ಶೇಕ್ ಹ್ಯಾಂಡ್ ಚಾಲೇಂಜ್’ ಅನ್ನು ಪ್ರಾರಂಭಿಸಿದ್ದರು. ಇದೀಗ ನಟಿ ಸಿಂಧೂ ಅವರೂ ಸಹ ಹೊಸ ಚಾಲೇಂಜ್ ಅನ್ನು ಪ್ರಾರಂಭಿಸಿದ್ದಾರೆ. ಹೀಗಾಗಿ ಮುಂದೆ ಇನ್ನು ಯಾವ ಚಾಲೆಂಜ್ ಬರುತ್ತದೋ ಎಂದು ನೆಟ್ಟಿಗರು ಅಂದುಕೊಳ್ಳುತ್ತಿದ್ದಾರೆ.

Tags

Related Articles