ಸುದ್ದಿಗಳು

ಕೈರಾ ಸಂಭಾವನೆ ಕೇಳಿ ಬೆಚ್ಚಿಬಿದ್ದಿದ್ದಾರಂತೆ ನಿರ್ಮಾಪಕರು

ಹೈದ್ರಾಬಾದ್, ಜ.14: ಕೈರಾ ಅದ್ವಾನಿ ಟಾಲಿವುಡ್ ನಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು. ‘ಭರತ್ ಅನೆ ನೇನು’ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಯಾದ ಈ  ಬೆಡಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರೂರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಒಂದರ ಹಿಂದೊಂದರಂತೆ ಸ್ಟಾರ್ ನಟರು ಹಾಗೂ ನಿರ್ದೇಶಕರ ಚಿತ್ರಗಳೇ ಕೈರಾ ಅವರನ್ನು ಅರಸಿಕೊಂಡು ಬರುತ್ತಿದ್ದು, ಇದು ಸಹಜವಾಗಿಯೇ ಕೈರಾ ಅವರ ಸಂಭಾವನೆ ವಿಚಾರದ ಮೇಲೂ ಪರಿಣಾಮ ಬೀರಿದೆ.

ಇತ್ತೀಚೆಗಷ್ಟೇ ರಾಮ್ ಚರಣ್ ಹಾಗೂ ಕೈರಾ ನಟನೆಯ ‘ವಿನಯ ವಿಧೇಯ ರಾಮ’ ಬಿಡುಗಡೆಯಾಗಿದ್ದು, ಚಿತ್ರ ಸೋತರು, ಕೈರಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಕೈರಾ ಬಾಲಿವುಡ್ ನ ಎರಡು ಚಿತ್ರಗಳಿಗೆ ಸಹಿಹಾಕಿದ್ದು, ಇದರಲ್ಲಿ ಕರಣ್ ಜೋಹರ್ ಅವರ ಚಿತ್ರವೂ ಸೇರಿದೆ.ಕೋಟಿಗೂ ಅಧಿಕ ಬಾಚಿಕೊಳ್ಳುತ್ತಿದ್ದಾರಂತೆ ಕೈರಾ

ಕೈರಾ ಅವರ ಪ್ರಸಿದ್ಧಿ ತಾರಕ್ಕೇರುತ್ತಿದ್ದಂತೆ ಆಕೆಯ ಸಂಭಾವನೆಯೂ ಗಣನೀಯವಾಗಿ ಏರಿಕೆಯಾಗಿದೆ. ಚಿತ್ರರಂಗದ ಒಂದು ಮೂಲಗಳ ಪ್ರಕಾರ ಕೈರಾ ಅದ್ವಾನಿ ಒಂದು ಚಿತ್ರಕ್ಕೆ 1.25 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಡುತ್ತಿದ್ದು, ಟಾಲಿವುಡ್ ನ ನಿರ್ಮಾಪಕರು ಬೆಚ್ಚಿಬಿದ್ದಿದ್ದಾರಂತೆ. ಟಾಲಿವುಡ್ ನಲ್ಲಿ ಕೈರಾಗೆ ಬೇಡಿಕೆ ಇದೆ. ಹಾಗೆಂದ ಮಾತ್ರಕ್ಕೆ ಇಷ್ಟೊಂದು ಸಂಭಾವನೆ ಕೇಳುವುದೇ ಎಂದು ಕೆಲವರು ಮೂಗು ಮುರಿದರೆ, ಮತ್ತೆ ಕೆಲವರು ಬಾಲಿವುಡ್ ಹಿರೋಯಿನ್ ಎಂದ ಮೇಲೆ ಇಷ್ಟು ಕೊಡಲೇಬೇಕು ಎನ್ನುತ್ತಿದ್ದಾರಂತೆ.  ಇತ್ತೀಚೆಗೆ ಚಿತ್ರನಿರ್ಮಾಪಕರೊಬ್ಬರು ತಮ್ಮ ಮುಂದಿನ ಚಿತ್ರಕ್ಕಾಗಿ ಕೈರಾ ಅವರನ್ನು ಅಪ್ರೋಚ್ ಮಾಡಿದಾಗ ಆಕೆ 1.25 ಕೋಟಿ ಚೆಕ್ ನೀಡುವಂತೆ ಕೇಳಿದಾಗ ನಿರ್ಮಾಪಕರು ಶಾಕ್ ಗೆ ಒಳಗಾಗಿದ್ದು, ಆಕೆಯೊಂದಿಗೆ ನೆಗೋಷಿಯೇಷನ್ ಗೆ ಇಳಿದಿದ್ದಾರಂತೆ.

#kiaraadvani #kiaraadvanimovies #kiaraadvaniremuneration #balkaninews

Tags