ಸುದ್ದಿಗಳು

‘ಅರ್ನಾಲ್ಡ್’ ದೊಡ್ಡ ಫ್ಯಾನ್ ಅಂತೆ ನಮ್ಮ ಅಭಿನಯ ಚಕ್ರವರ್ತಿ

ಇದೇ ಮೊದಲ ಸಲ ಕನ್ನಡ ‘ಟರ್ಮಿನೇಟರ್: ಡಾರ್ಕ್ ಫೇಟ್’ ರಿಲೀಸ್ ಆಗುತ್ತಿದೆ. ಈ ಚಿತ್ರದ ಕನ್ನಡ ಟ್ರೇಲರ್ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಸೈನ್ಸ್ ಫಿಕ್ಷನ್ ಸಿನಿಮಾ ನಿರೀಕ್ಷಿಸುತ್ತಿರುವ ಚಿತ್ರರಸಿಕರಲ್ಲಿ ಕುತೂಹಲ ಮೂಡಿಸಿದೆ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

ನವೆಂಬರ್ 1ಕ್ಕೆ ಈ ಸಿನಿಮಾ ಅಮೆರಿಕದಲ್ಲಿ ಬಿಡುಗಡೆಯಾಗಲಿದ್ದು ಬಳಿಕ ಡಬ್ಬಿಂಗ್ ಸಿನಿಮಾಗಳು ಭಾರತೀಯ ತೆರೆಗಳಿಗೆ ಅಪ್ಪಳಿಸಲಿವೆ.

ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದು,

“ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿ ಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು  ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್‌ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ.” ಎಂದು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ ಕಿಚ್ಚ.

ಮೋದಿ ವಿರುದ್ದ ನಿಲ್ಲುವಷ್ಟು ದೊಡ್ಡವನು ನಾನಲ್ಲ.. ನಾನು ತಿರುಗಿ ಬಿದ್ದಿಲ್ಲ: ನಟ ಜಗ್ಗೇಶ್

#kicchasudeep #arnaldo #terminator

Tags