ಸುದ್ದಿಗಳು

ಮತ್ತೊಮ್ಮೆ ಲೆಜೆಂಡ್ ಐಕಾನ್ ನೊಂದಿಗೆ ನಾನು ಪರದೆಯನ್ನು ಹಂಚಿಕೊಳ್ಳುತ್ತಿದ್ದೇನೆ : ಕಿಚ್ಚ

ಹೈದರಾಬಾದ್,ಮಾ.16:

ಕನ್ನಡ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಈಗ ಪೈಲ್ವಾನ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ…  ಕೈಯಲ್ಲಿ  ಹಲವಾರು ಸಿನಿಮಾಗಳು ಇದ್ದು ಈಗ ಟಾಲಿವುಡ್ ನ ಸೈರಾ, ಚಿತ್ರದಲ್ಲೂ ನಟಿಸುತ್ತಿದ್ದಾರೆ.. ಈ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ಕೂಡ ನಟಿಸುತ್ತಿದ್ದು, ಕಿಚ್ಚ ಹಾಗೂ  ಅಮಿತಾಭ್ ಇಬ್ಬರೂ ಫೋಟೋವೊಂದನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಚಿತ್ರದಲ್ಲಿ, ನಟ ಬಿಗ್ ಬಿ ಯೊಂದಿಗೆ ಒಟ್ಟಿಗೆ ಕಾಣಿಸಿಕೊಂಡ ಕಿಚ್ಚ, ಇವರು  ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಗೋಸಾಯಿ ವೆಂಕಣ್ಣ ಪಾತ್ರವಹಿಸುತ್ತಾರೆ..

Related image

 ಹಿಂದಿ ಬ್ಲಾಕ್ಬಸ್ಟರ್ರಣ್

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ 2010 ರ ಹಿಂದಿ ಬ್ಲಾಕ್ಬಸ್ಟರ್ ‘ರಣ್’ ಚಿತ್ರದಲ್ಲಿ ಇವರು ಕೊನೆಯ ಬಾರಿಗೆ ಕೆಲಸ ಮಾಡಿದ್ದರು. ಟ್ವಿಟರ್ ನಲ್ಲಿ , ಅವರು ಫೋಟೋವನ್ನು ಹಂಚಿಕೊಂಡರು ಮತ್ತು ಚಲನಚಿತ್ರಕ್ಕಾಗಿ ಅವರನ್ನು ಆಯ್ಕೆಮಾಡಿದ ಅವರ ನಿರ್ಮಾಪಕ ಮತ್ತು ನಿರ್ದೇಶಕ ಸುರೇಂದ್ರ ರೆಡ್ಡಿಯವರಿಗೆ ಧನ್ಯವಾದ ಸಲ್ಲಿಸಿದರು.

ಕಿಚ್ಚನ ಟ್ವೀಟ್

‘ರಣ್’ 10 ವರ್ಷಗಳ ನಂತರದ ಚಿತ್ರೀಕರಣ, ಮತ್ತೊಮ್ಮೆ ಈ  ಲೆಜೆಂಡ್ ಐಕಾನ್ ನೊಂದಿದಗೆ ನಾನು ಪರದೆಯನ್ನು ಹಂಚಿಕೊಳ್ಳುತ್ತಿದ್ದೇನೆ,  ಅವರು ಸಿನಿಮಾವನ್ನು ಮಾಡಿ ನಮ್ಮೆಲ್ಲರನ್ನು ರಂಜಿಸುವುದರ ಮೂಲಕ ಅವರ ಜೀವನದ ಹೆಚ್ಚಿನ ಸಮಯವನ್ನು ಕಳೆದರು. ಧನ್ಯವಾದಗಳು # ಸೈರಾ, ರಾಮ್ಚರಣ್ ಎನ್ @ ಡಿಸುರೇಂದರ್ ನನಗೆ ಈ ಕ್ಷಣಗಳನ್ನು ಉಡುಗೊರೆಯಾಗಿ ನೀಡಿದ್ದಕ್ಕೆ  ಹಾಗೂ @ಎಸ್ ಆರ್ ಬಚ್ಚನ್ ಸರ್ ಧನ್ಯವಾದಗಳು ನಿಮ್ಮ ಪ್ರೀತಿಗೆ ಎಂದು ಬರೆದಿದ್ದಾರೆ.

ಸೈರಾ ನರಸಿಂಹ ರೆಡ್ಡಿ

ಸೈರಾ ನರಸಿಂಹ ರೆಡ್ಡಿ ಸಿನಿಮಾವು 1846 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ (ಇಐಸಿ) ವಿರುದ್ಧ ಬಂಡಾಯದ ಹೃದಯದಲ್ಲಿದ್ದ ರಾಯಲಸೀಮಾದ ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲಾವಾಡಾ ನರಸಿಂಹ ರೆಡ್ಡಿಯವರ ಜೀವನವನ್ನು ಆಧರಿಸಿದೆ. ಸುರೇಂದ್ರ ರೆಡ್ಡಿ ಅವರ ನಿರ್ದೇಶನದಲ್ಲಿ, ಜೀವನಚರಿತ್ರೆ ಈ ವರ್ಷ ದಸರಾಕ್ಕೆ ಬಿಡುಗಡೆಯಾಗಲಿದೆ.

ಮನೆಯಂಗಳದ ದಾಸವಾಳದ ಸೌಂದರ್ಯ ಲೀಲೆ

 

 

Tags

Related Articles