ಸುದ್ದಿಗಳು

ಸಲ್ಲು ಟ್ವೀಟ್ ಗೆ ಕಿಚ್ಚ ಅಂದ್ರು ‘ಇಂದು ಮರೆಯಲಾಗದ ಅದ್ಭುತ ದಿನ’

ಕಿಚ್ಚನ ಪೈಲ್ವಾನ್ ನೋಡಿದ ಸಲ್ಲು ಟ್ವೀಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ರು. ‘ಪೈಲ್ವಾನ್ ಒಂದು ಎಮೋಷನ್, ಕಾಮಿಡಿ ಹಾಗೂ ಆ್ಯಕ್ಷನ್ ಹೊಂದಿರುವ ಅದ್ಬುತವಾದ ಚಿತ್ರ’ ಎಂದು ಟ್ವೀಟ್ ಮಾಡಿದ್ರು. ಈಗ ಕಿಚ್ಚ ರಿಟ್ವೀಟ್ ಮಾಡಿದ್ದು ಸಲ್ಲು ಗೆ ಧನ್ಯವಾದ ಹೇಳಿದ್ದಾರೆ.

“ಸರ್ …….. ಧನ್ಯವಾದಗಳು…. ಇಂದು ಈಗಾಗಲೇ ನನ್ನ ಪ್ರತಿಯೊಬ್ಬ ಸ್ನೇಹಿತನೂ ನಮ್ಮ ಬೆನ್ನನ್ನು ತಟ್ಟುತ್ತಿದ್ದು, ಇಂದು ಅದ್ಭುತ ದಿನವಾಗಿತ್ತು, ಈ ಟ್ವೀಟ್ ಅದೆಲ್ಲವನ್ನೂ ಎತ್ತರಕ್ಕೇರಿಸುತ್ತೆ ಎಂದು ನಾನು ಹೇಳಬೇಕು”. ಎಂದು ರಿಟ್ವೀಟ್ ಮಾಡಿದ್ದಾರೆ ಕಿಚ್ಚ.

ಚಿತ್ರ ವಿಮರ್ಶೆ: ಕುಸ್ತಿ ಅಖಾಡದಲ್ಲಿ ಅಬ್ಬರಿಸುತ್ತಲೇ ಆಪ್ತವಾಗುವ ‘ಪೈಲ್ವಾನ್’!

#kicchasudeep #pailwaan #sandalwood #salmankhan

Tags