ಸುದ್ದಿಗಳು

ಕಿಚ್ಚನನ್ನು ಹಾಡಿ ಹೊಗಳಿದ ರಾಮ್ ಚರಣ್

ಇತ್ತೀಚೆಗೆ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.

ತೆಲುಗು ಸ್ಟಾರ್​ ನಟ ಚಿರಂಜೀವಿ ಮುಖ್ಯಭೂಮಿಕೆ ನಿರ್ವಹಿಸಿರುವ ‘ಸೈರಾ’ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್​, ಹಿಂದಿಯ ಅಮಿತಾ ಬಚ್ಚನ್​, ಕಾಲಿವುಡ್​ನ ವಿಜಯ್​ ಸೇತುಪತಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ರಾಮ್ ಚರಣ್​ ನಿರ್ಮಾಣದ ಈ ಸಿನಿಮಾಗೆ ಸುರೇಂದ್ರ ರೆಡ್ಡಿ ಆ್ಯಕ್ಷನ್​  ಕಟ್​ ಹೇಳಿದ್ದಾರೆ.

Related image

ಇನ್ನು ಕಿಚ್ಚ ಅವುಕುರಾಜು ಪಾತ್ರಕ್ಕೆ ಬಣ್ಣ ಹಚ್ಚಿ ಎಲ್ಲರನ್ನು ಬೆರಗಾಗುವಂತೆ ನಟಿಸಿದ್ರು. ಕಿಚ್ಚನ ಅಭಿನಯಕ್ಕೆ ಮನಸೋತು ಅನೇಕ ಸ್ಟಾರ್ ನಟರು ನಿರ್ದೇಶಕರು ಫಿದಾ ಆಗಿದ್ರು.

ಈಗ ಸೈರಾ ನರಸಿಂಹ ರೆಡ್ಡಿ ನಿರ್ಮಾಪಕ ರಾಮ್ ಚರಣ್ ಕಿಚ್ಚನ ನಟನೆಗೆ ಫಿದಾ ಆಗಿ ಟ್ವೀಟ್ ಮಾಡಿದ್ದಾರೆ.

“ಕಿಚ್ಚ ಗಾರು, ನೀವು ಮತ್ತೆ ಸೂಪರ್ ಎಂದು ಪ್ರೂವ್ ಮಾಡಿದ್ದೀರಿ. ನಿಮ್ಮ ಶಕ್ತಿ ಮೀರಿ ಮಾಡಿದ ಕೆಲಸ ಹಾಗೂ ನಮಗೆ ಸ್ಫೂರ್ತಿ ನೀಡಿದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ. ಇದಕ್ಕೆ ಕಿಚ್ಚ ಧನ್ಯವಾದಗಳು” ಎಂದು ರೀಟ್ವೀಟ್ ಮಾಡಿದ್ದಾರೆ.

‘ಪರಶುರಾಮ್’ ಚಿತ್ರಕ್ಕೆ ತುಂಬಿತು 30 ವರುಷ!

#ramcharan #kicchasudeep #sandalwood #syeraanarasimhareddy

Tags