ಸುದ್ದಿಗಳು

ಮೊದಲ ಪಂದ್ಯದಲ್ಲಿಯೇ ಭರ್ಜರಿ ಜಯ ತಮ್ಮದಾಗಿಸಿಕೊಂಡ ಕಿಚ್ಚ ಸುದೀಪ್ ತಂಡ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇವೆಲ್ಲದರ ನಡುವೆ ಈ ನಟ ಕ್ರಿಕೆಟ್ ನಲ್ಲೂ ಭಾಗಿಯಾಗಿದ್ದಾರೆ. ಸುದೀಪ್ ಗೆ ಮೊದಲಿನಿಂದ ಕ್ರಿಕೆಟ್ ಮೇಲೆ ಪ್ರೀತಿ ಇದ್ದೇ ಇದೆ. ಬಹಳಷ್ಟು ಟೂರ್ನಿಗಳನ್ನು ಸುದೀಪ್ ಆಡಿದ್ದಾರೆ. ಸೆಲಿಬ್ರಿಟಿ ಕ್ರಿಕೆಟ್ ಲೀಗ್, ಕೆಪಿಎಲ್, ಕೂಡ ಇವರ ನೇತೃತ್ವದಲ್ಲೇ ನಡೆದಿದೆ. ಸದ್ಯ ಈ ನಟ ಲಂಡನ್ ನಲ್ಲಿ ಕ್ರಿಕೆಟ್ ಲೀಗ್ ನಲ್ಲಿ ಭಾಗಿಯಾಗಿದ್ದು, ಮೊದಲ ಪಂದ್ಯದಲ್ಲಿಯೇ ಈ ನಟನ ತಂಡ ಜಯ ಸಾಧಿಸಿದೆ.

ಮೊದಲೇ ಜಯ ಸಾಧಿಸಿದ ಸುದೀಪ್

ಕಾರ್ಪೊರೇಟ್‌ ಕ್ರಿಕೆಟ್‌ ಡೇ ಟೂರ್ನ್‌ಮೆಂಟ್‌ ನಲ್ಲಿ ಆಡಲು ಇತ್ತೀಚೆಗೆ ಸುದೀಪ್ ಅವರು ಲಂಡನ್‌ ಪ್ರವಾಸ ಕೈಗೊಂಡಿದ್ದರು. ಸೆಲೆಬ್ರೆಟಿಗಳ ಜೊತೆ ವೃತ್ತಿ ನಿರತ ಆಟಗಾರರು ಸೇರಿ ನಡೆಸುವ ಕಾರ್ಪೊರೇಟ್ ಕ್ರಿಕೆಟ್‌ ಪಂದ್ಯದಲ್ಲಿ, ಸುದೀಪ್ ​ರವರ ತಂಡ ಲಂಡನ್‌ ವಿಷನೇರ್‌ ಮೊದಲ ಜಯ ಸಾಧಿಸಿದೆ. ಇದೇ ತಿಂಗಳು 12ರಂದು ಅಂದರೆ ಮೊನ್ನೆಯಿಂದ ಪಂದ್ಯ ಆರಂಭವಾಗಿತ್ತು. ಸದ್ಯ ಮೊದಲೇ ಜಯ ಸಾಧಿಸಿದ್ದಾರೆ ಸುದೀಪ್. ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಸುದೀಪ್ ತಂಡದಾಗಿತ್ತು. ಈ ಕ್ರಿಕೆಟ್ ನಲ್ಲಿ ಸುದೀಪ್ ಆಪ್ತ ಸ್ನೇಹಿತರಾದ ಪ್ರದೀಪ್ ಹಾಗೂ ರಾಜೀವ್ ಸಾಥ್ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ‘ರಾಬರ್ಟ್’ ಚಿತ್ರದ ದರ್ಶನ್ ಲುಕ್

#balkaninews #london #londonlordsstadium #sudeep #pradeepbogadi #rajeevhanu

 

Tags