ಸುದ್ದಿಗಳು

‘ ದಬಾಂಗ್ -3’: ಕಿಚ್ಚನ ಸಿಕ್ಸ್ ಪ್ಯಾಕ್ ಫೋಟೋ

ಸುದೀಪ್ ಹಿಂದೆ ಎಂದೂ ಜೊಮ್ ಮೊರೆ ಹೋದವರಲ್ಲ. ಆದ್ರೆ ಪೈಲ್ವಾನ್ ಸಿನಿಮಾಕ್ಕಾಗಿ ಕಿಚ್ಚ ಸುದೀಪ್ ಸಖತ್ ವರ್ಕೌಟ್ ಮಾಡಿದ್ರು. ಜಿಮ್​ ಬಾಡಿ ಹಾಗೂ ಸಿಕ್ಸ್ ಪ್ಯಾಕ್​ ಈಗಲೂ ಹಾಗೇ ಇದೆ. ದಬಾಂಗ್ -3 ಚಿತ್ರಕ್ಕಾಗಿ ಕಿಚ್ಚ ಅದೇ ಹವಾ ಮೈಂಟೇನ್ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಅವರು ಈಗ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಈ ಚಿತ್ರ.

ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಿಚ್ಚ ಹಾಗೂ ಸಲ್ಲು ಫೈಟಿಂಗ್ ಸೀನ್ ಇದೆ. ಅದಕ್ಕಾಗಿ ಕಿಚ್ಚ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದಬಾಂಗ್ -3 ಪ್ರಭುದೇವ ನಿರ್ದೇಶಿಸಿದ್ದು ಕನ್ನಡದಲ್ಲೂ ರಿಲೀಸ್ ಆಗಲಿದೆ. ಇದೇ ಡಿಸೆಂಬರ್ 20 ರಂದು ದಬಾಂಗ್ -3 ತೆರೆ ಮೇಲೆ ಅಬ್ಬರಿಸಲಿದೆ

ನಟಿ ಮೋಹಿನಿ ಈಗ ಹೇಗಿದ್ದಾರೆ ನೋಡಿ..!

#kicchasudeep #dabangg3

Tags