ಸುದ್ದಿಗಳು

‘ನಾನು ಮತ್ತು ಗುಂಡ’ ನ ಮೆಚ್ಚಿದ ಕಿಚ್ಚ..!

ಗುಂಡನಿಗೆ ಕಿಚ್ಚ ಹೇಳಿದ್ದೇನು ಗೊತ್ತಾ..?

ಚಂದನವನದಲ್ಲಿ ರಿಲೀಸ್ ಆಗ್ತಿರೋ ಭಿನ್ನ ವಿಭಿನ್ನ ಕಥಾಹಂದರದ ಚಿತ್ರಗಳ ನಡುವೆ ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ ‘ನಾನು ಮತ್ತು ಗುಂಡ’ ಕಳೆದ 24 ರಂದು  ರಾಜ್ಯಾದ್ಯಂತ ಬಿಡುಗಡೆಯಾಗಿ ಎಲ್ಲೆಡೆ ಗುಡ್ ರೆಸ್ಪಾನ್ಸ್ ಕೆಳಿಬರ್ತಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್ ಕೆ ಆರ್‍ ಪೇಟೆ ಆಟೋ ಚಾಲಕನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ  ಈ ಚಿತ್ರದಲ್ಲಿ ಸಿಂಬ ಎಂಬ ಶ್ವಾನವು ಪ್ರಮುಖವಾಗಿ ಗಮನಸೆಳೆದಿತ್ತು.

ನೈಜ ಘಟನೆ ಆಧರಿಸಿದ ‘ನಾನು ಮತ್ತು ಗುಂಡ’ ಚಿತ್ರಕ್ಕೆ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನವಿದೆ. ರಘು ಹಾಸನ್ ನಿರ್ಮಾಪಕರಾಗಿರೋ ನಾನು ಮತ್ತು ಗುಂಡ ಭಾವಾನಾತ್ಮಕವಾಗಿ ಹಾಗು ಹಾಸ್ಯಮಯವಾಗಿ ಸಿನಿಪ್ರಿಯರ ಗಮನ ಥಿಯೇಟರ್ ನತ್ತ ಹರಿಸ್ತಿದೆ. ಇನ್ನೂ ಕಾಮಿಡಿ ಸ್ಟಾರ್ ಶಿವರಾಜ್ ಕೆ.ಆರ್ ಪೇಟೆಗೆ ನಾಯಕಿಯಾಗಿ ಸಂಯುಕ್ತಾ ಹೊರನಾಡು ನಟಿಸಿದ್ದಾರೆ.ಟ್ರೈಲರ್, ಪೋಸ್ಟರ್ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿದ್ದ ನಾನು ಮತ್ತು ಗುಂಡ ಕಳೆದ ವಾರ ಥಿಯೇಟರ್ ಗೆ ಎಂಟ್ರಿ ಕೊಟ್ಟು ಸಿನಿಅಭಿಮಾನಿಗಳ ಹಾರ್ಟ್ ಫೇವರೀಟ್ ಆಗ್ತಿರುವಾಗಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನ್ಮಾದ ಬಗ್ಗೆ ಮಾತನಾಡಿದ್ದಾರೆ. ‘ಎಲ್ಲಾ ಕಡೆ ಚಿತ್ರದ ಬಗ್ಗೆ ಒಳ್ಳೆ ರಿವ್ಯೂಸ್ ಕೇಳಿಬರ್ತಿದೆ,ಇಡೀ .ತಂಡಕ್ಕೆ ಆಲ್ ದಿ ಬೆಸ್ಟ್ ಅಂತ ಟ್ವೀಟ್ ಮಾಡಿದ್ದಾರೆ’.

ಇನ್ನು ಚಿತ್ರದಲ್ಲಿ 5 ಹಾಡುಗಳಿದ್ದು, ಕಾರ್ತಿಕ್ ಶರ್ಮ ಸಂಗೀತ ನೀಡದ್ರೆ, ಶಿವಾನಂದ್ ಛಾಯಾಗ್ರಹಣ, ಶರತ್ ಚಕ್ರವರ್ತಿ ಸಂಭಾಷಣೆಯಿದೆ. ಒಟ್ಟಾರೆ ಮೆಚ್ಚುಗೆಗೆ ಪಾತ್ರವಾಗ್ತಿರೋ ನಾನು ಮತ್ತು ಗುಂಡ ನ ಭಾವಾನಾತ್ಮಕ ಸೆಳೆತದಲ್ಲಿ ಅಂಥದ್ದೇನಿದೆ ಅನ್ನೋದಾದ್ರೆ,ಮಿಸ್ ಮಾಡ್ದೆ ನೀವು ಸಿನ್ಮಾನ ನೋಡ್ಬೇಕು.

#Sudeep #KicchaSudeep #NaanuMattuGunda #KannadaCinema

Tags