ಸುದ್ದಿಗಳು

ಟ್ವಿಟರ್ ಗೆ ಕಿಚ್ಚ ಲಗ್ಗೆ ಇಟ್ಟು ಬರೋಬ್ಬರಿ 10 ವರ್ಷ!

ಕಿಚ್ಚ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಅದರಲ್ಲೂ ಟ್ವಿಟರ್ ನಲ್ಲಿ ಕಿಚ್ಚ ಸದಾ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ. ಕಿಚ್ಚ ಟ್ವಿಟರ್ ಗೆ ಬಂದು ಬರೋಬ್ಬರಿ 10 ವರ್ಷಗಳಾಗಿವೆ. 2.3 ಮಿಲಿಯನ್ ಫ್ಯಾನ್ ಫಾಲೋವಿಂಗ್ ಹೊಂದಿರುವ ಕನ್ನಡದ ಏಕೈಕ ನಟ ಕಿಚ್ಚ.

ಈ ಖುಷಿ ವಿಚಾರವನ್ನು ತಮ್ಮ ಟ್ವಿಟರ್ ನಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ.

“ನೀವು ಸ್ನೇಹಿತರಲ್ಲರೂ ನನಗೆ 10 ವರ್ಷಗಳ ಒಗ್ಗೂಡಿಸುವಿಕೆ, ಪ್ರೀತಿ , ಬೆಂಬಲ, ಶಕ್ತಿ, ನಿಷ್ಠೆ ,,, ಎಲ್ಲವನ್ನೂ ನೀಡಿದ್ದೀರಿನನಗೆ ತುಂಬಾ ವಿಶೇಷವೆನಿಸಿದ ಎಲ್ಲರಿಗೂ ಧನ್ಯವಾದಗಳು. ಎಲ್ಲರಿಗೂ ಅಪ್ಪುಗೆ .. 2258759 ಬಾರಿ ಲುವ್ ಯು” ಎಂದು ಟ್ವೀಟ್ ಮಾಡಿದ್ದಾರೆ

ಕಿಚ್ಚನಿಗೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್, ಹಾಲಿವುಡ್, ಮಾಲಿವುಡ್ ಎಲ್ಲಾ ಭಾಷೆಯ ಫ್ಯಾನ್ಸ್ ಕೂಡ ಕಿಚ್ಚನನ್ನು ಫಾಲೋ ಮಾಡ್ತಾರೆ. ಅದಕ್ಕೆ ಕಾರಣವೇ ಕಿಚ್ಚ ತಮ್ಮ ಅಭಿಮಾನಿಗಳ ಮೇಲಿಟ್ಟಿರುವ ಪ್ರೀತಿ.

ಇವರೇನಾ ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಚಿನ್ನು ಆಲಿಯಾಸ್ ರಶ್ಮಿ ಪ್ರಭಾಕರ್

#kicchasudeep #kicchatwitter #kicchasudeepmovie

Tags