ಸುದ್ದಿಗಳು

ಟ್ವಿಟರ್ ನಲ್ಲಿ 1 ಲಕ್ಷ ಫಾಲೋವರ್ಸ್ ಹೆಚ್ಚಿಕೊಂಡ ಕಿಚ್ಚ ಹೇಳಿದ್ದೇನು?

ಕಿಚ್ಚ ಸುದೀಪ್ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇರಲಿ. ಸೋಶಿಯಲ್ ಮಿಡಿಯಾ ಅಂತ ಬಂದಾಗ ಕಿಚ್ಚ ಸಖತ್ ಆಕ್ಷಿವ್ ಇರುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ, ತಮ್ಮ ಅಭಿಮಾನಿಗಳ ಜೊತೆ ಸದಾ ಟ್ವಿಟರ್ ನಲ್ಲಿ ಟಚ್ನಲ್ಲಿರುತ್ತಾರೆ.

ಅಭಿಮಾನಿಗಳು ಏನೇ ಕಿಚ್ಚನಿಗೆ ಟ್ಯಾಗ್ ಮಾಡಿದ್ರು ಕಿಚ್ಚ ಅದನ್ನು ಖುಷಿಯಿಂದ ಸ್ವೀಕರಿಸಿ ಅವರಿಗೆ ಶುಭಾಶಯ ತಿಳಿಸ್ತಾರೆ. ಬಹುಶಃ ಇದೇ ಪ್ರೀತಿ ಇರಬೇಕು ಕಿಚ್ಚನಿಗೆ ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸೋಕೆ ಸಾಧ್ಯ ಆಗಿದ್ದು.

ಟ್ವಿಟರ್ ನಲ್ಲಿ ಕಿಚ್ಚನಿಗೆ ಈಗ 2.3 ಮಿಲಿಯನ್ ಫಾಲೋವರ್ಸ್ ಆಗಿದ್ದು, ಈ ಖುಷಿಯ ವಿಚಾರವನ್ನು ಶೇರ್ ಮಾಡಿದ್ದಾರೆ.

“ಟ್ವಿಟ್ಟರ್ನಲ್ಲಿ ನನ್ನನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡ ಹೊಸ 1 ಲಕ್ಷ ಫ್ರೆಂಡ್ಸ್ ಗೆ  ಗೆ ಧನ್ಯವಾದಗಳು. ಇಷ್ಟು ದಿನ 2.2ಮಿಲಿಯನ್ ಸ್ನೇಹಿತರು ನನ್ನೊಂದಿಗೆ ಇದ್ದೀರಿ ಧನ್ಯವಾದಗಳು” ಎಂದು ಬರೆದಿದ್ದಾರೆ

ಅಮ್ಮನ ಪಾತ್ರವನ್ನು ಮಾಡುತ್ತಿರುವುದಕ್ಕೆ ಬೇಸರವಿಲ್ಲ: ನಟಿ ಶಾಲಿನಿ

#kicchasudeep #kicchatwitter #bollywood

Tags