ಸುದ್ದಿಗಳು

ಶ್ರೇಷ್ಠ ಲೆಜೆಂಡ್ ಹುಟ್ಟಿದ ದಿನ.. ಕಿಚ್ಚ ಟ್ವೀಟ್!!

ಬೆಂಗಳೂರು,ಏ.24: ಇಂದು ಕನ್ನಡದ ಮೇರುನಟ ದಿವಂಗತ ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬ.. 91 ನೇ ವರ್ಷದ ಹುಟ್ಟುಹಬ್ಬ!! ಅಣ್ಣಾವ್ರ ಹುಟ್ಟುಹಬ್ಬವನ್ನು ನಾಡಿನೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಣ್ಣಾವ್ರ ಹುಟ್ಟುಹಬ್ಬ ಎಂದರೆ ನಾಡಿಗೆ ಹಬ್ಬವಿದ್ದಂತೆ..
ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು … ಇನ್ನು ಕಿಚ್ಚ ರಾಜ್ ಅವರನನ್ನು ನೆನೆದು ಟ್ವೀಟ್ ಮಾಡಿದ್ದಾರೆ..

Related image

ಕಿಚ್ಚನ ಟ್ವೀಟ್
ಈ ದಿನವನ್ನು ಎಂದೂ ಮರೆಯಲಾಗದು.. ಸಿನಿಮಾರಂಗ ಇರುವವರೆಗೂ ಈ ದಿನವನ್ನು ನೆನಪಿಸಿಕೊಳ್ಳುತ್ತಾರೆ. ಶ್ರೇಷ್ಠ ಲೆಜೆಂಡ್ ಹುಟ್ಟಿದ ದಿನ.., ತಮ್ಮ ಕೆಲಸದ ಮೂಲಕ ಅಮರತ್ವವನ್ನು ಪಡೆದರು, ಡಾ. ರಾಜ್ಕುಮಾರ್ ಸರ್.ಖಂಡಿತವಾಗಿ ಅವರ ಅಭಿಮಾನಿಗಳಿಗೆ , ಕುಟುಂಬದವರಿಗೆ ಒಂದು ದೊಡ್ಡ ಹಬ್ಬದ ದಿನ, ಎಲ್ಲರಿಗೂ ಏಪ್ರಿಲ್ 24 ರ ಶುಭಾಶಯ. ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ

ರಣಬೀರ್ – ಆಲಿಯಾ ಭಟ್ ವೈರಲ್ ಹಗ್..!

#rajkumar #kicchasudeep #birthday

Tags