ಸುದ್ದಿಗಳು

ತಮ್ಮ ಅಭಿಮಾನಿಗಳ ಪರವಾಗಿ ಪತ್ರ ಬರೆದ ‘ಪೈಲ್ವಾನ್’

ಸದ್ಯ ಚಂದನವನದಲ್ಲಿ ‘ಪೈಲ್ವಾನ್’ ಚಿತ್ರದ ಕುರಿತಂತೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಫೈಟ್ ನಡೆಯುತ್ತಿದೆ. ಈ ಚಿತ್ರವು ಪೈರಸಿಯಾಗಿದ್ದಕ್ಕೆ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಮ್ ಗೆ ದೂರು ಸಲ್ಲಿಸಿದರು.Image result for kiccha sudeep pailwaan

ಅಚ್ಚರಿಯೆಂದರೆ ನಟ ದರ್ಶನ್ ‘ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು-ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ” ಎಂದು ಟ್ವೀಟ್ ಮೂಲಕ ದರ್ಶನ್ ಎಚ್ಚರಿಕೆ ನೀಡಿದ್ದರು.

ಈಗ ಕಿಚ್ಚ ಅದಕ್ಕೆ ಪ್ರತಿಕ್ರಿಯೆ ನೀಡಿ ಪತ್ರವೊಂದು ಬರೆದಿದ್ದಾರೆ

“ಕೆಲವು ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಬದಲು ಒಳ್ಳೆಯ ವಿಷಯಗಳ ಮೇಲೆ ಜೀವಿಸುವತ್ತಾ ಗಮನಹರಿಸಬೇಕೆಂದು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಕೆಲವು ವಿಷಯಕ್ಕೆ ನಾವು ಕಿವಿಯನ್ನು ಕಿವುಡರಂತೆ  ಕಣ್ಣನ್ನು ಕುರುಡರಂತೆ ಇರಿಸುವುದು ಉತ್ತಮ. ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ. ಆದ್ದರಿಂದ  ಅದರ ಹಿಂದೆ ಹೋಗೋಣ”.  ಎಂದು ಲೆಟರ್ ಬರೆದಿದ್ದಾರೆ

ಇದು ಅಪರೂಪದ ಕಥೆಯ ತಾಜಾ ‘ಕಿಸ್’!

#pailwaan #kicchatweet #kicchasudeep #kicchasudeepletter

Tags