ಸುದ್ದಿಗಳು

ಕಿಚ್ಚನ ಸಾಧನೆಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚನ ಪತ್ನಿ..

ಚಿತ್ರರಂಗದ ಬೆಂಬಲ

ಬೆಂಗಳೂರು,ಸೆ.08: ಕೆಸಿಸಿ (ಕನ್ನಡ ಕ್ರಿಕೆಟ್ ಕಪ್) ಪಂದ್ಯಗಳು ಇಂದಿನಿಂದ ಶುರು ಆಗಲಿದೆ. ಹೌದು ಕನ್ನಡ ಚಿತ್ರರಂಗದ ನಟರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಒವೇಸ್ ‍ಷಾ, ಗಿಲ್ ಕ್ರಿಸ್ಟ್, ತಿಲಕರತ್ನೆ ದಿಲ್ಶಾನ್ ಕೂಡ ಮೈದಾನಕ್ಕೆ ಇಳಿಯಲಿದ್ದಾರೆ. ಚಂದನವನದಲ್ಲಿ ಇಂದಿನಿಂದ ಹಬ್ಬದ ವಾತಾವರಣ ಶುರುವಾಗಿದೆ.

ಕೆಸಿಸಿ ಕಪ್ ಟೂರ್ನಮೆಂಟ್

ಕನ್ನಡ ಚಲನಚಿತ್ರ ಕಪ್ ಹೆಸರಿನಲ್ಲಿ ಎಲ್ಲರೂ ಒಂದೆಡೆ ಸೇರುತ್ತಿದ್ದಾರೆ. ಎರಡು ದಿನಗಳ ವರೆಗೆ ನಡೆಯಲಿರುವ ಕ್ರಿಕೆಟ್ ​ಟೂರ್ನಿಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ.

ಕೆಸಿಸಿ ಕಾನ್ಸೆಪ್ಟ್​ ಹುಟ್ಟಿಕೊಂಡಿದ್ದು ಸುದೀಪ್​​ ಅವರಲ್ಲಾದ್ರೂ ಕೂಡ ಇದಕ್ಕೇ ಇಡೀ ಚಿತ್ರರಂಗ ಕೈ ಜೋಡಿಸಿದೆ. ಕೆಸಿಸಿ ಕಪ್ ಟೂರ್ನಮೆಂಟ್ ಕಲರ್ಸ್ ಸೂಪರ್ ನಲ್ಲಿ ಸೆಪ್ಟೆಂಬರ್ 8 ಮತ್ತು 9 ರಂದು ಶನಿವಾರ ಮತ್ತು ಭಾನುವಾರದಂದು ನೇರ ಪ್ರಸಾರವಾಗಲಿದೆ. ಕ್ರಿಕೆಟ್ ನಿಂದ ಒಗ್ಗಟ್ಟು ಎಂಬ ಮಂತ್ರ ಪಠನ ತಮ್ಮದಾಗಿಸಿಕೊಂಡಿರುವ ಕಿಚ್ಚ ಕಳೆದ 7 ವರ್ಷಗಳಿಂದ ಸಿಸಿಎಲ್ ಪಂದ್ಯಾವಳಿಗಳನ್ನು ಹಮ್ಮಿಕೊಂಡಿದ್ದಾರೆ. ಈಗ್ಗೆ ಎರಡು ವರ್ಷಗಳಿಂದ ಕರ್ನಾಟಕ ಚಲನಚಿತ್ರ ಕಪ್, ಕೆಸಿಸಿ ಕಪ್ ಕೂಡಾ ಅದೇ ನಿಟ್ಟಿನಲ್ಲಿ ಕೈಗೂಡುತ್ತಿದೆ.

ಕಿಚ್ಚನ ಪತ್ನಿ ಸಂತಸ

ಇನ್ನು ಕಿಚ್ಚನ ಈ ಸಾಹಸಕ್ಕೆ ಅವರ ಪತ್ನಿ ಪ್ರಿಯಾ ರಾಧಾಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಕೆಸಿಸಿ ಕಣ್ತುಂಬಿಕೊಳ್ಳಲು ಎಲ್ಲರೂ ಉತ್ಸುಕರಾಗಿದ್ದಾರೆ. ಕನ್ನಡ ಚಿತ್ರರಂಗವು ತಮ್ಮ ಬೆಂಬಲ ನೀಡುವುದರ ಜತೆಗೆ ಒಂದೆಡೆ ಬಂದು ಸೇರಿರುವುದು ಅದ್ಭುತ ಎಂದು ಹೇಳಿದ್ದಾರೆ

Tags

Related Articles