ಸುದ್ದಿಗಳು

ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ ಕಿಚ್ಚ !!

ಬೆಂಗಳೂರು,ಜ.29:

ಸುದೀಪ್ ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ಇವರು ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆಯ ನಟರಾಗಿ ಹೆಸರು ಮಾಡಿದ್ಡಾರೆ. ೧೯೯೯ರಲ್ಲಿ ತೆರೆ ಕಂಡ ‘ತಾಯವ್ವ’ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಅದೇ ವರ್ಷ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಪ್ರತ್ಯರ್ಥ’ ಚಿತ್ರದಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರು. ೨೦೦೦ರಲ್ಲಿ ತೆರೆ ಕಂಡ ಸುನೀಲ್ ಕುಮಾರ್ ದೇಸಾಯಿ ಅವರದೇ ನಿರ್ದೇಶನದ ‘ಸ್ಪರ್ಶ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡರು. ‘ಮೈ ಆಟೋಗ್ರಾಫ್’ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿದ್ದಾರೆ..

Image result for sudeep

ಸಿನಿ ಪಯಣಕ್ಕೆ ಬರೋಬ್ಬರಿ 23 ವರ್ಷ

ಇಂದಿಗೆ ಸುದೀಪ್ ತಮ್ಮ ಸಿನಿ ಪಯಣಕ್ಕೆ ಬರೋಬ್ಬರಿ 23 ವರ್ಷ ಕಳೆದಿದೆ.. ಈ ಸಂದರ್ಭದಲ್ಲಿ ಅನೇಕ ನಟರು ಹಾಗೂ ಫ್ಯಾನ್ಸ್ ಕಿಚ್ಚನಿಗೆ ಶುಭಾಶಯ ಕೋರಿದ್ದಾರೆ.. ಅಷ್ಟೇ ಅಲ್ಲದೆ ಪೋಸ್ಟರ್ ಮಾಡಿ 23 ವರ್ಷ ಚಿತ್ರರಂದಲ್ಲಿ ಕಳೆದ್ದೀರಿ, ಹಾಗಾಗಿ ಸರ್ಪ್ರೈಸ್ ಸೂನ್ ಎಂಬ ಪೋಸ್ಟರ್ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ..

ಸದ್ಯ ಪೈಲ್ವಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.. ಶಿವರಾತ್ರಿ ಹಬ್ಬಕ್ಕೆ ಪೈಲ್ವಾನ್ ಚಿತ್ರ ತೆರೆ ಮೇಲೆ ಬರಲಿದೆ..

ಸೌಂಧರ್ಯವರ್ಧಕ, ಬಹು ಉಪಯೋಗಿ ಘೃತ ಯಾ ಮನೆ ತುಪ್ಪ!!

#balkaninews #sandalwood #kicchasudeep23yearsinindustry

Tags